ನವದೆಹಲಿ: ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ಯಾವುದೇ ತರನಾದ ಪ್ರಭಾವಗಳನ್ನು ಬೀರದಂತೆ ಸಾಮಾಜಿಕ ಜಾಲತಾಣಗಳಿಗೆ ಅದರಲ್ಲೂ ಮುಖ್ಯವಾಗಿ ಫೇಸ್ಬುಕ್ಗೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಅಗತ್ಯಬಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ.
ಕ್ಯಾಂಬ್ರೀಡ್ಜ್ ಅನಲಿಟಿಕ ಎಂಬ ಬ್ರಿಟಿಷ್ ಕನ್ಸಲ್ಟಿಂಗ್ ಕಂಪನಿ ಸುಮಾರು 50 ಮಿಲಿಯನ್ ಫೇಸ್ಬುಕ್ ಬಳಕೆದಾರರ ಮಾಹಿತಿಯನ್ನು ಅನುಮತಿಯಿಲ್ಲದೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ರಾಜಕಾರಣಿಗಳ ಅನುಕೂಲಕ್ಕಾಗಿ ಕದ್ದಿದೆ ಎಂಬ ವರದಿಗಳು ಬಹಿರಂಗವಾದ ಹಿನ್ನಲೆಯಲ್ಲಿ ಕೇಂದ್ರ ಈ ಎಚ್ಚರಿಕೆಯನ್ನು ನೀಡಿದೆ.
ಭಾರತ ಸರ್ಕಾರ ಸೋಶಲ್ ಮೀಡಿಯಾ ಬಳಕೆ ಪ್ರೋತ್ಸಾಹಿಸುತ್ತದೆ. ಜನರು ನಮ್ಮನ್ನು ಇವುಗಳ ಮೂಲಕ ನೇರವಾಗಿ ಪ್ರಶ್ನಿಸಬಹುದು. ಆದರೆ ವಿದೇಶಿ ಸಂಸ್ಥೆ ಬಳಸಿ ದೌರ್ಜನ್ಯಕ್ಕೊಳಪಡಿಸುವುದನ್ನು ಸಹಿಸಲಾಗದು ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
20 ಕೋಟಿ ಭಾರತೀಯರು ಫೇಸ್ಬುಕ್ನಲ್ಲಿದ್ದಾರೆ. ಮಾಹಿತಿ ಕಳ್ಳತನದ ಬಗ್ಗೆ ಮಾರ್ಕ್ ಜುಕರ್ಬರ್ಗ್ ಇನ್ನೂ ತುಟಿ ಬಿಚ್ಚಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.