ಜಮ್ಮು: ಪ್ರಧಾನಿ ನರೇಂದ್ರ ಮೋದಿಯವರ ಅತೀದೊಡ್ಡ ಅಭಿಮಾನಿಯಾಗಿರುವ 30 ವರ್ಷದ ಜಮ್ಮುವಿನ ವೈದ್ಯೆ ಡಾ.ಮೇಘಾ ಮಹಾಜನ್ ಅವರು ತಮ್ಮ ವಿಚ್ಛೇದಿತ ಪತಿಯಿಂದ ಜೀವನಾಂಶವಾಗಿ ಬಂದ ರೂ.45 ಲಕ್ಷವನ್ನು ಸ್ವಚ್ಛ ಭಾರತಕ್ಕಾಗಿ ದಾನ ಮಾಡಿದ್ದಾರೆ.
‘ಮೋದಿ ದೇಶಕ್ಕಾಗಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಅಪ್ಪಟ ಅಭಿಮಾನಿ ನಾನು. ಜೀವನಾಂಶವಾಗಿ ಬಂದ ಹಣವನ್ನು ಸ್ವಚ್ಛ ಭಾರತಕ್ಕೆ ನೀಡುತ್ತಿದ್ದೇನೆ. ಇದಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ ಎಂದು ನನಗನಿಸುತ್ತದೆ’ ಎಂದು ಡಾ.ಮೇಘ ಹೇಳಿದ್ದಾರೆ.
‘ಹೆಣ್ಣು ಮಕ್ಕಳು ಜೀವನಾಂಶ ಹಣಕ್ಕಾಗಿ ವಿಚ್ಛೇದನ ನೀಡುತ್ತಾರೆ ಎಂಬ ಆರೋಪವನ್ನು ಸುಳ್ಳು ಮಾಡಿ ತೋರಿಸಿದ್ದೇನೆ. ಜೀವನಾಂಶ ಪಡೆದೇ ಪಡೆಯುತ್ತೇನೆ ಆದರೆ ಅದನ್ನು ನನ್ನ ಸ್ವಂತಕ್ಕೆ ಉಪಯೋಗಿಸುವುದಿಲ್ಲ ಎಂದು ಮೊದಲೇ ನಾನು ನಿರ್ಧರಿಸಿದ್ದೆ’ ಎಂದಿದ್ದಾರೆ.
ಅಷ್ಟೇ ಅಲ್ಲದೇ ಅವರು ನೀರು ಮತ್ತು ವಾಯು ಶುದ್ಧೀಕರಣ ಯೋಜನೆಯ ಬಗ್ಗೆ ಸ್ವಚ್ಛ ಭಾರತ ಸಮಿತಿಗೆ ಪತ್ರವನ್ನೂ ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.