ಸೌದಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಸೌದಿ ಅರೇಬಿಯದ ಅಲ್ ಜನದ್ರಿಯದಲ್ಲಿ ನಡೆಯಲಿರುವ ‘ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್’ನ್ನು ಉದ್ಘಾಟನೆಗೊಳಿಸಲಿದ್ದಾರೆ.
ಈ ವರ್ಷದ ಫೆಸ್ಟಿವಲ್ಗೆ ಭಾರತ ಗೌರವ ಅಥಿತಿ ದೇಶವಾಗಿದ್ದು, ಮೂರು ದಿನಗಳ ಸೌದಿ ಪ್ರವಾಸ ಕೈಗೊಳ್ಳಲಿರುವ ಸುಷ್ಮಾ ಫೆಸ್ಟಿವಲ್ನಲ್ಲಿ ಭಾರತದ ನಿಯೋಗವನ್ನು ಮುನ್ನಡೆಸಲಿದ್ದಾರೆ.
ಎರಡು ದಿನಗಳ ಈ ಫೆಸ್ಟಿವಲ್ ಗಲ್ಫ್ ದೇಶದ ಅತೀದೊಡ್ಡ ಸಾಂಸ್ಕೃತಿಕ ಉತ್ಸವವಾಗಿದ್ದು, ಸೌದಿಯ ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುತ್ತದೆ. ಈ ವರ್ಷ ೩೨ನೇ ಫೆಸ್ಟಿವಲ್ನನ್ನು ಆಚರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.