ನವದೆಹಲಿ: ಫೆ.9ರಿಂದ ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೇಸ್ತೇನ್, ಒಮನ್, ಯುಎಇಗಳಿಗೆ ಭೇಟಿಕೊಡಲಿದ್ದು, ಈ ವೇಳೆ ಅಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮೂಲಗಳ ಪ್ರಕಾರ ಫೆ.11ರಂದು ಮೋದಿ ದುಬೈ ಮತ್ತು ಮಸ್ಕತ್ನ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದುಬೈ ಕಾರ್ಯಕ್ರಮದಲ್ಲಿ ಸುಮಾರು ೨ಸಾವಿರ ಮಂದಿ ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅದೇ ದಿನ ಸಂಜೆ ಮಸ್ಕತ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ 20 ಸಾವಿರ ಭಾರತೀಯರು ಭಾಗವಹಿಸಲಿದ್ದಾರೆ.
ಮೊದಲು ಪ್ಯಾಲೇಸ್ತೇನ್ಗೆ ತೆರಳಿ ಅಲ್ಲಿ 5 ಗಂಟೆಗಳ ಕಾಲ ಕಳೆಯಲಿರುವ ಮೋದಿ ಬಳಿಕ ಯುಎಇಗೆ ಆಗಮಿಸಲಿದ್ದಾರೆ.