ನವದೆಹಲಿ: ನಗದು ರಹಿತ ವಹಿವಾಟುಗಳು, ಆಧಾರ್ ಆಧಾರಿತ ನಗದು ವರ್ಗಾವಣೆಗಳು, ಇತ್ತೀಚಿನ ಪದ್ಮ ಅವಾರ್ಡ್ಗಳು ಭ್ರಷ್ಟಾಚಾರ ವಿರೋಧಿ ಮತ್ತು ಪಾರದರ್ಶಕತೆಯ ಜನರ ಆಶಯವನ್ನು ಪ್ರತಿಧ್ವನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಿಸಿದ್ದಾರೆ.
ಯುವಕರನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ ಮೋದಿ, ಭ್ರಷ್ಟಾಚಾರಿಗಳು ಎಷ್ಟೇ ಶಕ್ತಿವಂತರಾಗಿದ್ದರೂ ಸರಿ ಅವರನ್ನು ಸಹಿಸುವುದಿಲ್ಲ ಎಂದಿದ್ದಾರೆ.
‘ಈ ದೇಶದ ಯುವಕರು ಭ್ರಷ್ಟಾಚಾರವನ್ನು ಸಹಿಸುತ್ತಾರೆ ಎಂದು ನನಗನಿಸುವುದಿಲ್ಲ. ಸಮಾಜದಲ್ಲಿ ಭ್ರಷ್ಟಾಚಾರದ ಬಗೆಗಿನ ದ್ವೆಷ ಎದ್ದು ಕಾಣುತ್ತಿದೆ. ನಾನು ಇದಕ್ಕೆ ಸಹಕರಿಸಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಕಲು ಬಯಸುತ್ತೇನೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.