ಲಕ್ನೋ: ಉತ್ತರಪ್ರದೇಶದ ಶಹದತ್ಗಂಜ್ನ ಮದರಸವೊಂದರಲ್ಲಿ ಬಾಲಕಿಯರನ್ನು ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಈ ಮದರಸದ ಮೇಲೆ ದಾಳಿ ನಡೆಸಿ ಅದರ ನಿರ್ವಾಹಕನನ್ನು ಬಂಧಿಸಿದ್ದಾರೆ ಮತ್ತು 51 ಬಾಲಕಿಯರನ್ನು ರಕ್ಷಣೆ ಮಾಡಿದ್ದಾರೆ.
ಮದರಸದೊಳಗೆ ಬಂಧಿಯಾಗಿದ್ದ ಬಾಲಕಿಯರು ಕಾಗದವೊಂದರಲ್ಲಿ ತಾವು ಅನುಭವಿಸುತ್ತಿರುವ ನರಕ ಯಾತನೆಯನ್ನು ವಿವರಿಸಿ ಪಕ್ಕದ ಕಂಪೌಂಡ್ನಲ್ಲಿದ್ದ ಮನೆಯತ್ತ ಬಿಸಾಕಿದ್ದರು. ಇದನ್ನು ನೋಡಿದ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಲಕ್ನೋದ ಜಂಟಿ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸಿ 51 ಬಾಲಕಿಯರನ್ನು ಬಂಧಿಸಿದೆ. ಮದರಸದಲ್ಲಿ ಒಟ್ಟು 125 ಮಂದಿ ಬಾಲಕಿಯರು ಇದ್ದರು ಎನ್ನಲಾಗಿದೆ.
ಮದರಸದ ನಿರ್ವಾಹಕ ಈ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮತ್ತು ನೃತ್ಯ ಮಾಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.