ರಾಂಚಿ: ಮಕ್ಕಳಲ್ಲಿ ಹೆತ್ತವರ ಬಗ್ಗೆ ಗೌರವ ಮೂಡಿಸುವ ಸಲುವಾಗಿ ಜಾರ್ಖಾಂಡ್ನ ಪ್ರತಿ ಶಾಲೆಗಳಲ್ಲೂ ವರ್ಷಕ್ಕೆ ಒಂದು ಬಾರಿ ‘ಮಾತಾ-ಪಿತ ಪೂಜನ’ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ದಿನ ವಿದ್ಯಾರ್ಥಿಗಳು ಈ ದಿನ ತಮ್ಮ ತಂದೆ ತಾಯಿಗೆ ಪೂಜೆ ಸಲ್ಲಿಸಲಿದ್ದಾರೆ.
ಅಲ್ಲಿನ ಶಿಕ್ಷಣ ಸಚಿವ ನೀರಾ ಯಾದವ್ ಅವರ ಆದೇಶದ ಮೇರೆಗೆ ಶಿಕ್ಷಣ ಇಲಾಖೆ ಈಗಾಗಲೇ ರಾಜ್ಯದ ಎಲ್ಲಾ 40 ಸಾವಿರ ಶಾಲೆಗಳಿಗೆ ‘ಮಾತಾ-ಪಿತ ಪೂಜನಾ’ ದಿನ ಆಚರಿಸುವಂತೆ ನಿರ್ದೇಶನ ನೀಡಿದೆ.
‘ಮಕ್ಕಳಲ್ಲಿ ದೇಶದ ಸಂಸ್ಕೃತಿ, ಪರಂಪರೆಯ ಬಗ್ಗೆ ಗೌರವ ಮೂಡಿಸುವುದು ನಮ್ಮ ಈ ಕಾರ್ಯಕ್ರಮದ ಉದ್ದೇಶ. ಪುಸ್ತಕ ಓದುವುದು ಮಾತ್ರ ಅಧ್ಯಯನವಲ್ಲ. ಮಕ್ಕಳನ್ನು ಉತ್ತಮ ಮನುಷ್ಯರನ್ನಾಗಿಸುವುದು, ಸಂಸ್ಕೃತಿ ಬಗ್ಗೆ ತಿಳುವಳಿಕೆ ಮೂಡಿಸುವುದು ಕೂಡ ಸಂಸ್ಕೃತಿಯ ಭಾಗ’ ಎಂದು ಶಿಕ್ಷಣ ಸಚಿವ ನೀರಾ ಯಾದವ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.