ನವದೆಹಲಿ: ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ತೊಲಗಿಸಲು ಸರ್ವ ಸನ್ನದ್ಧವಾಗಿದೆ, ಸರ್ಕಾರ ತೆಗೆದುಕೊಂಡು ನಿಯಮಗಳಿಗೆ ರಾಜಕೀಯವಾಗಿ ಬೆಲೆ ತೆರಲು ನಾನು ಸಿದ್ಧನಾಗಿದ್ದೇನೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
’15ನೇ ಹಿಂದೂಸ್ಥಾನ್ ಟೈಮ್ಸ್ ಲೀಡರ್ಶಿಪ್ ಸಮಿತ್ನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಪ್ಪುಹಣದ ಬಗ್ಗೆ ಹೊರಬಿದ್ದ ಮಾಹಿತಿಗಳು ಭಾರತದ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಹಾಯಕವಾಗಲಿದೆ ಎಂದರು.
‘ಭ್ರಷ್ಟಾಚಾರವನ್ನು ತೊಲಗಿಸಲು ತೆಗೆದುಕೊಂಡ ನಿಯಮಗಳಿಗೆ ನಾನು ರಾಜಕೀಯವಾಗಿ ಬೆಲೆ ತೆರಬೇಕಾಗಬಹುದು, ಆದರೆ ನಾದಕ್ಕೆ ಸಿದ್ಧನಾಗಿದ್ದೇನೆ. ಜಿಎಸ್ಟಿ ಪಾರದರ್ಶಕತೆ ಮತ್ತು ಬೇನಾಮಿ ಆಸ್ತಿ ವಿರುದ್ಧ ತೆಗೆದುಕೊಂಡ ಅಸ್ತ್ರ’ ಎಂದಿದ್ದಾರೆ.
ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರೂ ಈ ಸಮಿತ್ನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.