ಏಷ್ಯನ್ ಮ್ಯಾರಥಾನ್ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ಗೋಪಿ ತೊನಕ್ವಲ್ ಇತಿಹಾಸ ನಿರ್ಮಿಸಿದ್ದು, ಈ ಚಾಂಪಿಯನ್ಶಿಪ್ ಗೆದ್ದ ಏಕೈಕ ಭಾರತೀಯನಾಗಿದ್ದಾನೆ.
ನ.26ರಂದು ನಡೆದ ಈ ಪ್ರತಿಷ್ಠಿತ ಮ್ಯಾರಥಾನ್ನಲ್ಲಿ ಗೋಪಿಯವರು 2 ಗಂಟೆ, 15 ನಿಮಿಷ, 48 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಉಜ್ಬೇಕಿಸ್ತಾನದ ಆಂಡ್ರೆ ಪೆಟ್ರಾವ್ ಅವರು ಎರಡನೇ ಸ್ಥಾನ ಗೆದ್ದುಕೊಂಡಿದ್ದಾರೆ.
ಪ್ರತ್ಯೇಕ ಏಷ್ಯನ್ ಮ್ಯಾರಥಾನ್ ಚಾಂಪಿಯನ್ಶಿಪ್ ಆದ ಬಳಿಕ ಈ ಪ್ರಶಸ್ತಿ ಗೆದ್ದ ಏಕೈಕ ಭಾರತೀಯ ಗೋಪಿಯಾಗಿದ್ದಾರೆ.
ಈ ಹಿಂದೆ ಇದು ಏಷ್ಯನ್ ಟ್ರ್ಯಾಕ್ ಆಂಡ್ ಫೀಲ್ಡ್ ಚಾಂಪಿಯನ್ಶಿಪ್ನ ಭಾಗವಾಗಿದ್ದಾಗ ಭಾರತದ ಆಶಾ ಅಗರ್ವಾಲ್ ಬಂಗಾರ ಗೆದ್ದುಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.