ನವದೆಹಲಿ: ವಿಶ್ವದ ಮೂರನೇ ಅತೀ ನಂಬಿಕಸ್ಥ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ. ಆರ್ಗನೈಝೇಶನ್ ಫಾರ್ ಎಕನಾಮಿಕ್ ಕೋ-ಅಪರೇಶನ್ ಆಂಡ್ ಡೆವಲಪ್ಮೆಂಟ್ ನಡೆಸಿದ ಸಮೀಕ್ಷೆಯಿಂದ ಇದು ತಿಳಿದು ಬಂದಿದೆ.
‘ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತೀ ನಂಬಿಕಸ್ಥ ಸರ್ಕಾರಗಳಲ್ಲಿ ಒಂದಾದ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಮುಕ್ಕಾಲು ಭಾಗದಷ್ಟು ಭಾರತೀಯರು ತಮ್ಮ ಕೇಂದ್ರ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ ಎಂಬುದಾಗಿ ಹೇಳಿದ್ದಾರೆ’ ಎಂದು ತನ್ನ ನೂತನ ವರದಿಯನ್ನು ಉಲ್ಲೇಖಿಸುವ ಸಂದರ್ಭ ವರ್ಲ್ಡ್ ಎಕನಾಮಿಕ್ ಫೋರಂ ಹೇಳಿದೆ.
ಸರ್ಕಾರದ ಭ್ರಷ್ಟಾಚಾರ ವಿರೋಧಿ ಕ್ರಮ ಮತ್ತು ತೆರಿಗೆ ಸುಧಾರಣಾ ಕ್ರಮಗಳು ಜನರಿಗೆ ಅದರ ಮೇಲಿನ ನಂಬಿಕೆಯನ್ನು ಹೆಚ್ಚುಪಡಿಸಿದೆ ಎನ್ನಲಾಗಿದೆ.
ಶೇ.೮೨ರಷ್ಟು ಜನರ ಭರವಸೆ ಪಡೆದ ಸ್ವಿಟ್ಜರ್ಲ್ಯಾಂಡ್ ಸರ್ಕಾರ ಮೊದಲ ಸ್ಥಾನ, ಶೇ.೮೨ರಷ್ಟು ನಂಬಿಕೆ ಪಡೆದಿರುವ ಇಂಡೋನೇಷ್ಯಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.