ಮಾಸ್ಕೋ: ರಷ್ಯಾ ತನ್ನ ಅತೀದೊಡ್ಡ ಹೊಸ ತಲೆಮಾರಿನ ಪರಮಾಣು ಶಸ್ತ್ರಸಜ್ಜಿತ ಇಂಟರ್ ಕಾಂಟಿನೆಂಟಲ್ ಬ್ಯಾಲೆಸ್ಟಿಕ್ ಮಿಸೈಲ್(ಐಸಿಬಿಎಂ) ಸತನ್ 2 ಅನ್ನು ಪರೀಕ್ಷಾರ್ಥ ಉಡಾವಣೆಗೊಳಿಸಲು ಸಜ್ಜಾಗಿದೆ.
ಕೇವಲ ಒಂದೇ ಒಂದು ದಾಳಿಯಲ್ಲಿ ಅಮೆರಿಕಾದ ರಕ್ಷಣಾತ್ಮಕ ವ್ಯವಸ್ಥೆಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಈ ಸತನ್ 2 ಕ್ಷಿಪಣಿಗಿದೆ ಎಂದು ರಷ್ಯಾ ಹೇಳಿದೆ.
ಸತನ್ 2ಸುಮಾರು 40 ಮೆಗಾಟನ್ ತೂಕದ 12 ಪರಮಾಣು ಸಿಡಿತಲೆಗಳನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 1945ರಲ್ಲಿ ಹಿರೋಶಿಮ ಮತ್ತು ನಾಗಸಾಕಿಯಲ್ಲಿ ಹಾಕಲಾದ ಅಣು ಬಾಂಬ್ಗಿಂತ 2 ಸಾವಿರ ಪಟ್ಟು ಹೆಚ್ಚು ಬಲಶಾಲಿಯಾಗಿದೆ ಎನ್ನಲಾಗಿದೆ.
ಹಲವಾರು ವಿಳಂಬಗಳ ಬಳಿಕ ಇದೀಗ ರಷ್ಯಾ ಇದನ್ನು ಉಡಾವಣೆಗೊಳಿಸಲು ಸಜ್ಜಾಗಿದ್ದು, ಅದರತ್ತ ಜಗತ್ತಿನ ಚಿತ್ತ ನೆಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.