ನವದೆಹಲಿ: ದೀಪಾವಳಿಯ ಶುಭ ದಿನದಂದು ಸರಯೂ ನದಿ ತೀರ ಮತ್ತು ದೇಗುಲ ನಗರಿ ಅಯೋಧ್ಯಾದಲ್ಲಿ ಎರಡು ಲಕ್ಷ ಹಣತೆಗಳು ಬೆಳಗಲಿವೆ. ಉತ್ತರಪ್ರದೇಶ ಸರ್ಕಾರದ ಈ ಬೃಹತ್ ದೀಪಾವಳಿ ಗಿನ್ನಿಸ್ ರೆಕಾರ್ಡ್ನ ಪುಟ ಸೇರುವ ನಿರೀಕ್ಷೆ ಇದೆ.
ಅಯೋಧ್ಯಾ ದಿವ್ಯ ದೀಪ್ ಉತ್ಸವ್ ಹೆಸರಿನಲ್ಲಿ ಯುಪಿ ಸರ್ಕಾರ ದೀಪಾವಳಿಯನ್ನು ಆಚರಣೆ ಮಾಡುತ್ತಿದೆ. ಲೇಸರ್ ಶೋದಿಂದ ಹಿಡಿದು ರಾಮಾಯಣದ ಪ್ರದರ್ಶನ, ವಿದೇಶಿ ಕಲಾವಿದರಿಂದ ರಾಮಲೀಲಾ ಕಾರ್ಯಕ್ರಮಗಳು ಈ ವೇಳೆ ಜರುಗಲಿವೆ.
ಸರಯು ಘಾಟ್, ರಾಮ್ ಕಥಾ ಘಾಟ್, ರಾಮ್ ಕಿ ಪೌರಿ ಘಾಟ್ಗಳಲ್ಲಿ ವಿದ್ಯಾರ್ಥಿಗಳು, ಎನ್ಸಿಸಿ ಕೆಡೆಟ್ಗಳು ಸೇರಿದಂತೆ ಹಲವಾರು ಮಂದಿ ದೀಪ ಬೆಳಗಿಸಲಿದ್ದಾರೆ.
ಕಳೆದ ವರ್ಷ ಸೆ.23 ರಂದು ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ಎಂದು ಕರೆಸಿಕೊಂಡಿದ್ದ ಗುರುಮೀತ್ ರಾಮ್ ರಹೀಮ್ ಸಿಂಗ್ ಸಿರ್ಸಾದಲ್ಲಿ ಒಟ್ಟು 1,50,008 ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದ. ಇದೀಗ ಆ ರೆಕಾರ್ಡ್ನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ ಮುರಿಯಲಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.