ಬೆಂಗಳೂರು: ಇದು ತಮಾಷೆಯೆನಿಸಿದರೂ ಕಟು ಸತ್ಯ. ಪ್ರತಿ ಬಾರಿ ಮಳೆಯಿಂದ ನೆರೆಯಂತಹ ಪರಿಸ್ಥಿತಿ ಎದುರಿಸುವ ಬೆಂಗಳೂರಿನಲ್ಲಿ ಜನರು ಬೋಟ್ ಖರೀದಿಸುವ ಸ್ಥಿತಿ ಬಂದೊದಗಿದೆ. ಕೋರಮಂಗಳ 4ನೇ ಬ್ಲಾಕ್ನ ನಿವಾಸಿಗಳು ಈಗಾಗಲೇ ಡಿಫ್ಲೇಟೇಬಲ್ ಬೋಟ್ಗಳನ್ನು ಖರೀದಿಸಿದ್ದಾರೆ.
ಬಿಬಿಎಂಪಿ ತೋರಿಸುವ ನಿರ್ಲಕ್ಷ್ಯ ಮತ್ತು ಮಳೆಯ ಸಂದರ್ಭದಲ್ಲಿ ಮನೆಯೊಳಗೆ ಸಿಲುಕಿಕೊಂಡು ಪರದಾಡುವುದರಿಂದ ಮುಕ್ತಿ ಪಡೆಯಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಲ್ಲದೇ ನಿವಾಸಿಗಳೇ ಬಿಬಿಎಂಪಿಯನ್ನು ಕಾಯದೆ ನೆರೆಯಲ್ಲಿ ಸಿಲುಕಿದ ಜನರ ರಕ್ಷಣಾ ಕಾರ್ಯವನ್ನು ಬೋಟ್ ಮೂಲಕ ಮಾಡುತ್ತಿದ್ದಾರೆ. ಕೆಲವರು ಎರಡು ಮೂರು ಬೋಟ್ಗಳನ್ನೂ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಮಹಾನಗರದ ಜನ ಕೃತಕ ನೆರೆಯ ಅಭಾವದಿಂದ ತಪ್ಪಿಸಲು ಬೋಟ್ ಮೊರೆ ಹೋಗಿದ್ದು ಹಾಸ್ಯಾಸ್ಪದವಾಗಿ ಕಂಡರೂ ಅವರ ಸಮಸ್ಯೆಯ ಭೀಕರತೆಯನ್ನು ಎತ್ತಿ ತೋರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.