ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಹೆಸರನ್ನು ದಾಖಲಿಸಲು ನಾಸಾ ಜನ ಸಾಮಾನ್ಯರಿಗೆ ಮತ್ತೊಂದು ಅವಕಾಶವನ್ನು ನೀಡಿದೆ. 2015ರಲ್ಲಿ ಒಟ್ಟು 8,27,000 ಜನ ಮಂಗಳನಲ್ಲಿಗೆ ತೆರಳಲಲು ಸಜ್ಜಾಗಿದ್ದ ಆನ್ಬೋರ್ಡ್ ರೊಬೋಟಿಕ್ ಸ್ಪೇಸ್ಕ್ರಾಫ್ಟ್ನ ಸಿಲಿಕಾನ್ ಮೈಕ್ರೋಚಿಪ್ಗೆ ತಮ್ಮ ಹೆಸರು ದಾಖಲಿಸಿದ್ದರು.
ಇದೀಗ ಮತ್ತೊಮ್ಮೆ ಇದೇ ಅವಕಾಶವನ್ನು ನಾಸಾ ನೀಡಿದೆ. 2018ರ ನವೆಂಬರ್ನಲ್ಲಿ ನಾಸಾದ ಇನ್ಸೈಟ್ ಲ್ಯಾಂಡರ್ ಹಲವಾರು ವಿಜ್ಞಾನ ಪರಿಕರವನ್ನು ಹೊತ್ತುಕೊಂಡು ಮಂಗಳನಲ್ಲಿಗೆ ತೆರಳಲಿದೆ. ಇದರಲ್ಲಿ ಜನ ಸಾಮಾನ್ಯರು ತಮ್ಮ ಹೆಸರನ್ನು ದಾಖಲಿಸಬಹುದು.
https://mars.nasa.gov/syn/insight ಈ ಲಿಂಕ್ಗೆ 2017ರ ಅಕ್ಟೋಬರ್ 2ರಿಂದ ನವೆಂವರ್ 1ರವರೆಗೆ ಹೆಸರನ್ನು ದಾಖಲಿಸಬಹುದಾಗಿದೆ. ಈ ಮೂಲಕ ಮಂಗಳನನ್ನು ಅಧ್ಯಯನ ಮಾಡುವ ಸ್ಪೇಸ್ಕ್ರಾಫ್ಟ್ನ ಭಾಗವಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.