ನವದೆಹಲಿ: ಸ್ಮಾರ್ಟ್ ಸಿಟಿಗಳ ನಡುವಣ ಸ್ಪರ್ಧೆಯನ್ನು ಉತ್ತೇಜಿಸುವ ಸಲುವಾಗಿ ಮತ್ತು ಯೋಜನೆಯ ಗುಣಮಟ್ಟ ಹಾಗೂ ಪ್ರಭಾವವನ್ನು ಅಳೆಯುವುದಕ್ಕಾಗಿ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ‘ಸ್ಮಾರ್ಟ್ ಸಿಟಿಸ್ ಅವಾರ್ಡ್ಸ್ ಕಾಂಟೆಸ್ಟ್ 2017’ನ್ನು ಆಯೋಜನೆಗೊಳಿಸಿದೆ.
ನಗರಗಳನ್ನು, ಯೋಜನೆಗಳನ್ನು ಮತ್ತು ನಾವೀಣ್ಯ ಐಡಿಯಾಗಳನ್ನು ಗುರುತಿಸಿ, ಪುರಸ್ಕರಿಸುವ ಉದ್ದೇಶ ಈ ಸ್ಪರ್ಧೆಯದ್ದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಸ್ಪರ್ಧೆಯ ವಿಜೇತರಿಗೆ 50 ಲಕ್ಷ ರೂಪಾಯಿಗಳು ದೊರೆಯಲಿವೆ.
2018ರ ಎಪ್ರಿಲ್ ಒಳಗೆ ಯೋಜನೆಯನ್ನು ಪೂರ್ಣಗೊಳಿಸಿದ ನಗರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹವಾಗಿವೆ. ಮುಂದಿನ ವರ್ಷದ ಜೂನ್ 25ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.