ನವದೆಹಲಿ: ಡೋಕ್ಲಾಂ ವಿಷಯದಲ್ಲಿ ಭಾರತ ಘನತೆಯನ್ನು ಕಾಪಾಡಿಕೊಂಡಿತು ಮತ್ತು ಶ್ರೇಷ್ಠ ಕಾರ್ಯ ವಿಧಾನವನ್ನು ಅನುಸರಿಸಿತು ಎಂಬುದಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.
ನಾವು ನಮ್ಮನ್ನು ಪ್ರಚೋದನೆಗೊಳಪಡದಂತೆ ನೋಡಿಕೊಂಡೆವು. ವಿವಾದ ಬಗೆಹರಿಸಲು ಪ್ರಬುದ್ಧ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಿದೆವು ಎಂದಿದ್ದಾರೆ.
ಬಿಕ್ಕಟ್ಟು ಶಮನಗೊಳಿಸಿ, ಸೇನೆಯನ್ನು ಹಿಂದಕ್ಕೆ ಕರೆಸುವ ಬೆಳವಣಿಗೆ ಸ್ವಾಗತಾರ್ಹ. ಇದೊಂದು ಪ್ರಬುದ್ಧ ಬೆಳವಣಿಗೆ. ಭಾರತ ಮತ್ತು ಚೀನಾ ಎರಡೂ ದ್ವಿಪಕ್ಷೀಯ ಸಂಬಂಧದಲ್ಲಿ ಕದನ ಅತೀ ದುಬಾರಿ ಎಂಬುದನ್ನು ಮನಗಂಡಿದೆ ಎಂದಿದ್ದಾರೆ.
ಭಾರತ ಈ ವಿಷಯದಲ್ಲಿ ಘನತೆಯನ್ನು ಕಾಪಾಡಿ, ಬಿಕ್ಕಟ್ಟನ್ನು ರಾಜತಾಂತ್ರಿಕ ನೆಲೆಯಲ್ಲಿ ಬಗೆಹರಿಸಲು ಮುಂದಾಯಿತು. ದ್ವಿಪಕ್ಷೀಯ ಸಂಬಂಧ ಮುಂದುವರಿಕೆಗೆ ಶಾಂತಿ ಕಾಪಾಡುವುದು ಅತ್ಯಗತ್ಯ. ಭಾರತ ಮುಂದೆಯೂ ಇದೇ ವಿಧಾನ ಅನುಸರಿಸಬೇಕಿದೆ ಎಂದು ರಾಮ್ ಮಾಧವ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.