ನವದೆಹಲಿ : ಭದ್ರತಾ ಸನ್ನಿವೇಶಗಳು ಉದ್ವಿಗ್ನಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾರತ ರಷ್ಯಾದೊಂದಿಗೆ ಸೇರಿ ಅಕ್ಟೋಬರ್ನಲ್ಲಿ ಮೆಗಾ ವಾರ್ ಗೇಮ್ನ್ನು ಆಯೋಜನೆ ಮಾಡಲು ನಿರ್ಧರಿಸಿದೆ.
ಉಭಯ ದೇಶಗಳ ಆರ್ಮಿ, ನೇವಿ ಮತ್ತು ವಾಯುಸೇನೆಗಳು ಇದೇ ಮೊದಲ ಬಾರಿಗೆ ಒಟ್ಟು ಸೇರಿ ಶಸ್ತ್ರಾಭ್ಯಾಸವನ್ನು ಮಾಡಲಿದೆ.
ಈ ‘ಇಂದ್ರ’ ಸಮರಾಭ್ಯಾಸ ರಷ್ಯಾದಲ್ಲಿ ಇದೇ ಅಕ್ಟೋಬರ್ 19 ರಿಂದ 29 ರ ವರೆಗೆ ಜರುಗಲಿದೆ.
ಉಭಯ ದೇಶಗಳ ನಡುವಿನ ಸೇನಾಪಡೆಗಳ ನಡುವೆ ಪರಸ್ಪರ ಸಹಕಾರವನ್ನು ಮೂಡಿಸುವುದು ಮತ್ತು ಏಕೀಕೃತ ಕಮಾಂಡೋ ಸೇವೆಯನ್ನು ನೀಡುವುದು ಈ ಅಭ್ಯಾಸದ ಪ್ರಮುಖ ಉದ್ದೇಶವಾಗಿದೆ.
ವಿದೇಶಿ ದೇಶದೊಂದಿಗೆ ಇಂತಹ ತ್ರಿ-ಸೇವಾ ಅಭ್ಯಾಸಗಳಲ್ಲಿ ಭಾರತ ಭಾಗವಹಿಸುತ್ತಿರುವುದು ಇದೇ ಮೊದಲು.
ಭಾರತದ ಒಟ್ಟು 350 ಯೋಧರು ಈ ಮೆಗಾ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಮೇಜರ್ಗಳು, ಜನರಲ್ ರ್ಯಾಂಕ್ ಅಧಿಕಾರಿಗಳು ಇದರಲ್ಲಿ ಇರಲಿದ್ದಾರೆ.
ಚೀನಾದೊಂದಿಗೆ ಭಾರತದ ಸಂಬಂಧ ಹಳಸಿರುವ ಈ ಸಂದರ್ಭದಲ್ಲಿ ರಷ್ಯಾದೊಂದಿಗೆ ಬೃಹತ್ ಸಮರಾಭ್ಯಾಸ ನಡೆಸುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.