ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷಕ್ಕೆ ಸುವರ್ಣ ಯುಗವನ್ನು ತಂದುಕೊಟ್ಟಿದ್ದಾರೆ, ಸುಧೀರ್ಘ ಕಾಲದಿಂದ ಕಾಂಗ್ರೆಸ್ ಪಕ್ಷದ ನೆಹರೂ-ಗಾಂಧಿ ಕುಟುಂಬದ ಬಲಿಷ್ಠ ನಿಯಂತ್ರಣದಲ್ಲಿದ್ದ ಭಾರತದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ಥಿಂಕ್ ಟ್ಯಾಂಕ್ ಹೇಳಿದೆ.
ಕಾರ್ನೆಜೆ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ನ ನಿರ್ದೇಶಕ ಮಿಲನ್ ವೈಷ್ಣವ್ ಹೇಳಿರುವಂತೆ, ಬಿಜೆಪಿ ಮುಂದಿನ ಸಾರ್ವತ್ರಿಕ ಚುನಾವಣೆಯ ಪ್ರಮುಖ ಸನ್ನಿವೇಶವನ್ನು ಮಾತ್ರ ಹೊಂದಿಲ್ಲ, ಶಕ್ತಿಶಾಲಿ ರಾಜ್ಯ ಸರ್ಕಾರಗಳನ್ನು ರಚಿಸುವತ್ತವೂ ದಾಪುಗಾಲು ಇಡುತ್ತಿದೆ ಎಂದಿದ್ದಾರೆ.
ಬಿಹಾರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಬಗ್ಗೆ ಉಲ್ಲೇಖಿಸಿರುವ ಅವರು, ಈ ಬೆಳವಣಿಗೆ ಈಗ ಬಿಜೆಪಿ ರಾಜಕೀಯ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದು ಎಂಬುದನ್ನು ಸಾರುತ್ತದೆ ಎಂದಿದ್ದಾರೆ.
ವ್ಯವಹಾರ ಸ್ನೇಹಿ ನಿಯಮ, ರಾಷ್ಟ್ರೀಯತಾವಾದ, ಯುವಜನರಲ್ಲಿ ಆಶಾವಾದ ಮೂಡಿಸುವ ಮೂಲಕ ಮೋದಿ ತಮ್ಮ ಪಕ್ಷವನ್ನು ಐತಿಹಾಸಿಕ ಚುನಾವಣಾ ಹಾದಿಯತ್ತ ಸಾಗಿಸಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.