ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಬಲಿಷ್ಠವಾಗಿ ಹೊರಹೊಮ್ಮುತ್ತಿದ್ದು, ಹೆಚ್ಚಿನ ಸಂಭಾವ್ಯತೆಯನ್ನು ಪ್ರದರ್ಶಿಸುತ್ತಿದೆ ಮತ್ತು ಡಿಜಿಟಲ್ ಪಾವತಿಯ ಸಂಭಾವ್ಯತೆ ಇರುವ ಟಾಪ್ 60ರಾಷ್ಟ್ರಗಳ ಪೈಕಿ ಭಾರತವೂ ಒಂದು ಎಂಬುದಾಗಿ ’ಡಿಜಿಟಲ್ ಇವಲ್ಯೂಷನ್ ಇಂಡೆಕ್ಸ್ 2017’ ತಿಳಿಸಿದೆ.
ಐಫ್ಟಸ್ ಯೂನಿವಸಿಟಿಯ ಫ್ಲೆಚರ್ ಸ್ಕೂಲ್ ಮತ್ತು ಮಾಸ್ಟರ್ಕಾರ್ಡ್ ಜಂಟಿಯಾಗಿ ’ಡಿಜಿಟಲ್ ಇವಲ್ಯೂಷನ್ ಇಂಡೆಕ್ಸ್ 2017’ನ್ನು ಅನಾವರಣಗೊಳಿಸಿವೆ.
ಈ ಇಂಡೆಕ್ಸ್ ಭಾರತವನ್ನು 60 ದೇಶಗಳ ‘ಬ್ರೇಕ್ ಔಟ್’ ಸೆಗ್ಮೆಂಟ್ ಕೆಟಗರಿಯಲ್ಲಿ ಇಟ್ಟಿದೆ. ಪ್ರಸ್ತುತ ಡಿಜಿಟಲ್ ಅಡ್ವಾನ್ಸ್ಮೆಂಟ್ನಲ್ಲಿ ಕೆಳಗಿರುವ ಆದರೆ ಪ್ರಗತಿಯತ್ತ ದಾಪುಗಾಲು ಇಟ್ಟು, ತಮ್ಮ ಡಿಜಿಟಲ್ ಸಂಭಾವ್ಯತೆಯಿಂದ ಹೂಡಿಕೆದಾರರನ್ನು ಆಕರ್ಷಿಸುವುದು ‘ಬ್ರೇಕ್ ಔಟ್ ಕೆಟಗರಿ’ಯಾಗಿದೆ.
ಡಿಜಿಟಲ್ ಎಕಾನಮಿಯಲ್ಲಿ ಪ್ರಗತಿ ಸಾಧಿಸುತ್ತಿರುವ ಮತ್ತು ಕೋಟ್ಯಾಂತರ ಜನರ ಬದುಕಿನೊಂದಿಗೆ ಸಂಪರ್ಕವನ್ನು ಸಂಯೋಜಿತಗೊಳಿಸುವ ಬಗ್ಗೆ ವಿಸ್ತೃತ ಸಂಶೋಧನೆಯನ್ನು ನಡೆಸಿ ಇಂಡೆಕ್ಸ್ ಸಿದ್ಧಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.