ನವದೆಹಲಿ: ಈ ವರ್ಷದ ಅಂತ್ಯದಲ್ಲಿ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪ್(ಐಆರ್ಸಿಟಿಸಿ)ಗೆ ಪ್ಯಾಂಟ್ರಿ ಕಾರ್ಗಳನ್ನೊಳಗೊಂಡ ಕ್ಯಾಟರಿಂಗ್ ಸರ್ವಿಸ್ನ್ನು ಹಸ್ತಾಂತರ ಮಾಡಲಾಗುತ್ತಿದೆ. ಇದು ಆನ್ಬೋರ್ಡ್ ಆಹಾರಗಳ ಗುಣಮಟ್ಟವನ್ನು ಸುಧಾರಿಸಲಿದೆ.
ಡಿಸೆಂಬರ್ ಅಂತ್ಯದ ವೇಳೆಗೆ ಐಆರ್ಸಿಟಿಸಿಗೆ ಎಲ್ಲಾ ರೈಲುಗಳಲ್ಲಿನ ಪ್ಯಾಂಟ್ರಿ ಕಾರುಗಳನ್ನೊಳಗೊಂಡ ಕೇಟರಿಂಗ್ ಸರ್ವಿಸ್ನ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಿದ್ದೇವೆ ಎಂದು ರೈಲ್ವೇ ಮಂಡಳಿ ಸದಸ್ಯ ಮೊಹಮ್ಮದ್ ಜಂಶೇದ್ ತಿಳಿಸಿದ್ದಾರೆ.
ಪ್ರಸ್ತುತ ರಾಜಧಾಣಿ, ಶತಾಬ್ದಿ, ಡ್ಯುರೊಂಟೊ ಸೇರಿದಂತೆ ಒಟ್ಟು 350 ರೈಲುಗಳಲ್ಲಿ ಪ್ಯಾಂಟ್ರಿ ಕಾರುಗಳನ್ನೊಳಗೊಂಡ ಕೇಟರಿಂಗ್ ಸೇವೆ ಇದೆ. ರೈಲ್ವೇ ವಲಯದಲ್ಲಿ ಕೇಟರಿಂಗ್ ಸೇವೆ ಅಭಿವೃದ್ಧಿಪಡಿಸುವ ಸಲುವಾಗಿ ಪ್ಯಾಂಟ್ರಿ ಕಾರ್, ಬೇಸ್ ಕಿಚನ್, ಫುಡ್ ಸಟಾಲ್ಗಳಲ್ಲಿ ಥರ್ಡ್ ಪಾರ್ಟಿ ಆಡಿಟ್ ನಡೆಸಲು ರೈಲ್ವೇ ಮುಂದಾಗಿದೆ.
ಥರ್ಡ್ ಪಾರ್ಟಿ ಆಡಿಟ್ಗೆ ಎರಡು ಸಂಸ್ಥೆಗಳನ್ನು ನಿಯೋಜಿಸಿದ್ದಾಗಿ ಜಂಶೇದ್ ಹೇಳಿದ್ದಾರೆ.
ಮಾತ್ರವಲ್ಲದೇ ಆಹಾಋ ಗುಣಮಟ್ಟ, ನೈರ್ಮಲ್ಯ ಪರಿಶೀಲನೆಗೆ ರೈಲ್ವೇ 3 ವಾರಗಳ ಅಭಿಯಾನವನ್ನೂ ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.