ಚಂಡೀಗಢ: ಬಾಲಿವುಡ್ನ ಜಾಲಿ ಎಲ್ಎಲ್ಬಿ, ಪೀಪ್ಲಿ ಲೈವ್, ಸ್ಲಂಡಾಗ್ ಮಿಲಿಯನೇರ್, ಪಾನ್ ಸಿಂಗ್ ತೋಮರ್ನಂತಹ ಪ್ರಸಿದ್ಧ ಸಿನಿಮಾಗಳಲ್ಲಿ ಅಭಿನಯಿಸಿದ್ದ, ಇದೀಗ ತೀವ್ರ ಸ್ವರೂಪ ಅನಾರೋಗ್ಯದಿಂದ ಬಳಲುತ್ತಿರುವ ನಟ ಸೀತಾರಾಮ್ ಪಂಚಲ್ ಅವರ ಸಹಾಯಕ್ಕೆ ಹರಿಯಾಣ ಸರ್ಕಾರ ಧಾವಿಸಿದೆ.
ಪಂಚಲ್ ಅವರು ಲಂಗ್ ಮತ್ತು ಕಿಡ್ನಿ ಕ್ಯಾನ್ಸರ್ಗೆ ತುತ್ತಾಗಿದ್ದು ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅವರ ಚಿಕಿತ್ಸೆಗೆ ಹಣಕಾಸಿನ ತೊಂದರೆಯೂ ಎದುರಾಗಿದೆ. ಹರಿಯಾಣದವರಾದ ಹಿನ್ನಲೆಯಲ್ಲಿ ಇದೀಗ ಅಲ್ಲಿನ ಸರ್ಕಾರ 5 ಲಕ್ಷ ರೂಪಾಯಿ ಹಣಕಾಸು ನೆರವು ನೀಡಿದೆ.
ಸಿನಿಮಾ ನಿರ್ಮಾಪಕ ಅಶ್ವಿನಿ ಚೌಧರಿ ಅವರು ಬಾಲಿವುಡ್ ಮಂದಿಯನ್ನೂ ಇವರಿಗೆ ಸಹಾಯ ಮಾಡುವಂತೆ ಕೋರಿದ್ದಾರೆ. ರಣದೀಪ್ ಹೂಡಾ ಸೇರಿದಂತೆ ಇತರರು ಇವರ ಸಹಾಯಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.