ನವದೆಹಲಿ: ದೆಹಲಿಯ ನ್ಯಾಷನಲ್ ಝೂಲಾಜಿಕಲ್ ಪಾರ್ಕ್ ಸದ್ಯದಲ್ಲೇ ಪ್ರಾಣಿ ದತ್ತು ಯೋಜನೆಯನ್ನು ಆರಂಭಿಸಲಿದೆ. ಈ ಮೂಲಕ ತನ್ನ ಝೂನಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವವರನ್ನು ಸೆಳೆಯಲು ಮುಂದಾಗಿದೆ.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಹರ್ಷವರ್ಧನ್ ಅವರ ಸಲಹೆಯ ಮೇರೆಗೆ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಇಂತಹ ಯೋಜನೆಯನ್ನು ದೇಶದ ಎಲ್ಲಾ ಝೂಗಳಲ್ಲಿ ಈಗಾಗಲೇ ಆರಂಭಿಸಲಾಗಿದೆ. ನಾಗರಿಕರು, ಕಾರ್ಪೋರೇಟ್ ಸಂಸ್ಥೆಗಳು ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ.
ಇದೀಗ ದೆಹಲಿ ಝೂನಲ್ಲೂ ಪ್ರಾಣಿ ದತ್ತು ಪಡೆಯುವಿಕೆಗೆ ಅವಕಾಶವಿದೆ. ಇಂತಿಷ್ಟು ಹಣವನ್ನು ನೀಡಿ ದತ್ತು ಪಡೆಯಬೇಕು. ಆ ಪ್ರಾಣಿಯ ಎಲ್ಲಾ ಖರ್ಚುವೆಚ್ಚಗಳನ್ನು ಲೆಕ್ಕಹಾಕಿ ಇಂತಿಷ್ಟು ದರ ನಿಗದಿ ಮಾಡಲಾಗುತ್ತದೆ, ಅದನ್ನು ದತ್ತು ಪಡೆದವರು ಭರಿಸಬೇಕು. ಪ್ರಾಣಿಗಳ ವೈದ್ಯಕೀಯ, ಆಹಾರ ಇತ್ಯಾದಿಗಳಿಗೆ ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ.
ದತ್ತು ಪಡೆದವರ ಹೆಸರನ್ನು ಪ್ರಾಣಿಯ ಪಂಜರದ ಮೇಲೆ ಬರೆಯಲಾಗುತ್ತದೆ, ಝೂಗೆ ಉಚಿತ ಪ್ರವೇಶ ನೀಡಲಾಗುತ್ತದೆ ಮತ್ತು ದತ್ತು ಪಡೆದ ಸರ್ಟಿಫಿಕೇಟ್ ದೊರೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.