ನವದೆಹಲಿ: ಮಾನವ ಸಂಪನ್ಮೂಲ ಸಚಿವಾಲಯವು ಭಾನುವಾರ 32 ಡಿಟಿಎಚ್ ಚಾನೆಲ್ಗಳಿಗೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಡಿಜಿಟಲ್ ಯೋಜನೆಗಳಿಗೆ ಚಾಲನೆ ನೀಡಿದೆ. ಇದರಿಂದಾಗಿ ದೇಶದಾದ್ಯಂತದ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಕಾರ್ಯಕ್ರಮಗಳನ್ನು ಪಡೆಯುವುದು ಸಾಧ್ಯವಾಗಲಿದೆ.
ಸ್ವಯಂ, ಸ್ವಯಂ ಪ್ರಭಾ ಮತ್ತು ನ್ಯಾಷನಲ್ ಅಕಾಡಮಿಕ್ ಡಿಪೋಸಿಟರಿ ಎಂಬ ಮೂರು ಡಿಜಿಟಲ್ ಯೋಜನೆಗಳಿಗೆ ಸಚಿವ ಪ್ರಕಾಶ್ ಜಾವ್ಡೇಕರ್ ಚಾಲನೆ ನೀಡಿದ್ದು, ಇದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ನೀಡುತ್ತಿರುವ ಗುರು ದಕ್ಷಿಣಾ ಎಂದು ಬಣ್ಣಿಸಿದರು.
ರಾಜಕೀಯಕ್ಕೆ ಬರುವ ಮುನ್ನ ಶಿಕ್ಷಕರಾಗಿದ್ದ ಮುಖರ್ಜಿಯವರಿಗೆ ಸನ್ಮಾನ ಮಾಡಿದ ಜಾವ್ಡೇಕರ್, ರಾಷ್ಟ್ರಪತಿಗಳ ಬದುಕೇ ಕ್ಯಾಲಿಬರ್, ಸಾಮರ್ಥ್ಯ ಮತ್ತು ನಡವಳಿಕೆಯ ದಾಖಲೆ. ಅವರು ದೇಶದ ಎಲ್ಲಾ ಶಿಕ್ಷಕರನ್ನು ಪ್ರತಿನಿಧಿಸುತ್ತಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.