ನವದೆಹಲಿ: ಸ್ವಚ್ಛ ಭಾರತದಿಂದ ಪ್ರೇರಣೆ ಪಡೆದು ನಿರ್ಮಾಣಗೊಂಡಿರುವ ನಟ ಅಕ್ಷಯ್ ಕುಮಾರ್ ಅಭಿನಯದ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
‘ಸ್ವಚ್ಛತೆಯ ಸಂದೇಶವನ್ನು ಮತ್ತಷ್ಟು ಜನಪ್ರಿಯಗೊಳಿಸುವಲ್ಲಿ ಉತ್ತಮ ಪ್ರಯತ್ನವನ್ನು ಸಿನಿಮಾ ಮಾಡಿದೆ. ಸ್ವಚ್ಛ ಭಾರತಕ್ಕಾಗಿ 125ಕೋಟಿ ಜನರು ಒಂದಾಗಿ ಕಾರ್ಯ ಮಾಡಬೇಕು’ ಎಂದು ಮೋದಿ ಟ್ವಿಟರ್ನಲ್ಲಿ ಹೇಳಿದ್ದಾರೆ.
ಅಕ್ಷಯ್ ಅವರು ಹಾಕಿದ್ದ. ‘ಸ್ವಚ್ಛ ಭಾರತಕ್ಕೆ ನನ್ನ ವಿನಮ್ರ ಕೊಡುಗೆ ಇಲ್ಲಿದೆ’ ಎಂದು ಅಕ್ಷಯ್ ಮಾಡಿದ ಟ್ವಿಟ್ಗೆ ಪ್ರತಿಕ್ರಿಯೆಯಾಗಿ ಮೋದಿ ಈ ಟ್ವಿಟ್ ಮಾಡಿದ್ದಾರೆ.
Good effort to further the message of cleanliness. 125 crore Indians have to continue working together to create a Swachh Bharat. https://t.co/C0XKPpguW7
— Narendra Modi (@narendramodi) June 12, 2017
ಈ ಬಹು ನಿರೀಕ್ಷಿತ ಸಿನಿಮಾದ ಟ್ರೇಲರ್ ಭಾನುವಾರ ಬಿಡುಗಡೆಗೊಂಡಿತ್ತು. 3 ನಿಮಿಷಗಳ ಈ ದೃಶ್ಯ ಭಾರತದಲ್ಲಿ ನೈರ್ಮಲ್ಯದ ಅವಶ್ಯಕತೆಯನ್ನು ಪ್ರತಿಪಾದಿಸುತ್ತದೆ. ಮಾತ್ರವಲ್ಲದೇ ಹೆಚ್ಚು ಹೆಚ್ಚು ಟಾಯ್ಲೆಟ್ಗಳನ್ನು ನಿರ್ಮಿಸಿ ಗ್ರಾಮೀಣ ಭಾಗದ ಬಯಲು ಶೌಚವನ್ನು ಹೋಗಾಲಾಡಿಸುವಂತೆ ನಮಗೆ ಪ್ರೇರಣೆ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.