ಮುಂಬಯಿ: ಆರೋಗ್ಯಕಾರಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಫಿಟ್ ಆಗಿರುವಂತೆ ಕರೆ ನೀಡುತ್ತಲೇ ಇರುವ ಬಾಲಿವುಡ್ ನಟಿ ಬಿಪಾಶ ಬಸು ಇದೀಗ ಅತ್ಯುತ್ತಮ ಸಾಮಾಜಿಕ ಕಾರ್ಯಕ್ಕೂ ಮುಂದಾಗಿದ್ದಾರೆ.
ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತರಾಗಿರುವ ಇವರು 2020 ರ ಸಮ್ಮರ್ ಪ್ಯಾರಾಲಿಂಪಿಕ್ನಲ್ಲಿ ಭಾಗವಹಿಸುವ ಭಾರತೀಯ ಪ್ಯಾರಾಲಿಂಪಿಕ್ ಅಥ್ಲೇಟ್ಗಳ ತರಬೇತಿಗೆ ಪ್ರಾಯೋಜಕತ್ವ ನೀಡಲು ಮುಂದಾಗಿದ್ದಾರೆ.
ಟೋಕಿಯೋದಲ್ಲಿ ಸಮ್ಮರ್ ಪ್ಯಾರ ಒಲಿಂಪಿಕ್ ನಡೆಯಲಿದ್ದು, ಇಲ್ಲಿ ಭಾಗವಹಿಸುವ ಭಾರತೀಯರಿಗೆ ಅತ್ಯುತ್ತಮ ತರಬೇತಿ ಒದಗಿಸಲು ಆಶಿಸಿದ್ದಾರೆ. ಮಾತ್ರವಲ್ಲ ಅಥ್ಲೇಟ್ಗಳಿಗೆ ಆಹಾರದ ಬಗ್ಗೆ ಕಾಳಜಿ ಮೂಡಿಸಲು ಒರ್ವ ಡಯಟೀಶಿಯನ್ನನ್ನೂ ನೇಮಿಸಲಿದ್ದಾರೆ.
ಬಿಪಾಶ ಅವರ ನಿರ್ಧಾರ ಬದಕನ್ನು ಬದಲಾಯಿಸುವುದು ಮಾತ್ರವಲ್ಲದೇ 2020ರ ಪ್ಯಾರ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅಥ್ಲೇಟ್ಗಳಿಗೆ ಒಳ್ಳೆಯ ಅವಕಾಶವನ್ನೂ ಕಲ್ಪಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.