ನವದೆಹಲಿ: ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು 3 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರ ನವ ಭಾರತವನ್ನು ನಿರ್ಮಿಸಲು ಕಟಿಬದ್ಧವಾಗಿದೆ ಎಂದಿದ್ದಾರೆ.
‘ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ಸುಧಾರಣೆ ಮತ್ತು ಪಾರದರ್ಶಕತೆಯ ಮೂಲಕ ನವ ಭಾರತವನ್ನು ಸೃಷ್ಟಿಸಲು ನಾವು ಬದ್ಧ’ ಎಂದು ಟ್ವಿಟರ್ನಲ್ಲಿ ಹೇಳಿದ್ದಾರೆ.
125 ಕೋಟಿ ಜನತೆಯ ಕೌಶಲ್ಯ ಮತ್ತು ಪ್ರತಿಭೆಯಿಂದ ಸಾಮರ್ಥ್ಯ ಸಿಗುತ್ತದೆ ಎಂದರು.
ದೇಶದ ರೈತರು ಪ್ರಗತಿ ಕಂಡಾಗ ನಾವೂ ಪ್ರಗತಿ ಕಾಣುತ್ತೇವೆ ಎಂದರು.
‘ಭಾರತ ಮೊದಲು ಎಂಬುದು ನಮ್ಮ ವಿದೇಶಿ ನೀತಿ. ವ್ಯಾವಹಾರಿಕವಾಗಿರಲಿ ಅಥವಾ ಸಾಂಸ್ಕೃತಿಕವಾಗಿರಲಿ ವಿಶ್ವದೊಂದಿಗಿನ ಸಂಬಂಧವನ್ನು ನಾವು ವೃದ್ಧಿಸಲು ಬಯಸುತ್ತೇವೆ’ ಎಂದಿದ್ದಾರೆ.
2014ರ ಮೇ 16ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭುತಪೂರ್ವ ಗೆಲುವು ಸಾಧಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.