ಚೆನ್ನೈ : ಕೇಂದ್ರದ ‘ಎಲ್ಲರಿಗೂ ವಸತಿ’ ಯೋಜನೆಯಡಿ ತಮಿಳುನಾಡು ಸರ್ಕಾರವು 2017-18 ರೊಳಗೆ 3 ಲಕ್ಷ ಮನೆಗಳನ್ನು ವಿತರಿಸಲಿದೆ ಎಂದು ಕೇಂದ್ರ ವಸತಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ.
ತಮಿಳುನಾಡು ಸರ್ಕಾರ ನನಗೆ ಈ ಭರವಸೆಯನ್ನು ನೀಡಿದ್ದು, 2017-18 ರೊಳಗೆ 3 ಲಕ್ಷ ಮನೆಯನ್ನು ಅದು ವಿತರಿಸಲಿದೆ. 2019-20 ಚುನಾವಣಾ ವರ್ಷವಾದುದರಿಂದ ವಸತಿ ಹಂಚಿಕೆಗೆ ಸಮಯಾವಕಾಶ ಇರುವುದಿಲ್ಲ ಎಂದರು.
ಇದಕ್ಕೆ ಬೇಕಾದ ಅನುದಾನವನ್ನು ರಾಜ್ಯಕ್ಕೆ ನೀಡಲಾಗಿದೆ. ಒಟ್ಟು 3855 ಕೋಟಿ ರೂ.ಗಳಲ್ಲಿ 1433 ಕೋಟಿ ರೂ.ನ್ನು ಇದುವರೆಗೆ ನೀಡಲಾಗಿದೆ ಎಂದರು.
ಭಾರತ ಸರ್ಕಾರದ ಅನುದಾನವನ್ನು ಬಳಸಿಕೊಳ್ಳುವುದರಲ್ಲಿ ತಮಿಳುನಾಡು ಉನ್ನತ ಸ್ಥಾನದಲ್ಲಿದೆ. ಈ ರಾಜ್ಯ ವಸತಿ ನಿರ್ಮಾಣಗಳ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ನಡೆಸಬೇಕಿದೆ.
ನ್ಯೂಸ್ಪೇಪರ್ಗಳಲ್ಲಿ ಜಾಹೀರಾತುಗಳ ಮೂಲಕ ನೀಡಲಾದ ಭರವಸೆಗಳನ್ನು ಈಡೇರಿಸುವಂತೆ ರಿಯಲ್ ಎಸ್ಟೇಟ್ ಡೆವಲಪ್ಪರ್ಸ್ಗೆ ಸಚಿವರು ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.