ಪಾಟ್ನಾ: ಆಗಾಗ ಕೋಮು ಗಲಾಟೆಗಳಿಗೆ ಸುದ್ದಿ ಮಾಡುತ್ತಿದ್ದ ಬಿಹಾರ ಈ ಬಾರಿ ಕೋಮು ಸೌಹಾರ್ದತೆಯಿಂದಾಗಿ ಸುದ್ದಿ ಮಾಡುತ್ತಿದೆ. ಇಲ್ಲಿನ ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯಕ್ಕಾಗಿ ತಮ್ಮ ಸ್ವಂತ ಜಾಮೀನನ್ನು ಬಿಟ್ಟುಕೊಟ್ಟಿದೆ.
ಬಿಹಾರದ ಗೋಪಾಲಗಂಜ್ ಜಿಲ್ಲೆಯ ಬತನಕುಟಿಯಲ್ಲಿನ ಐತಿಹಾಸಿಕ ದೇಗುಲವನ್ನು ವಿಸ್ತಾರಗೊಳಿಸುವ ಸಲುವಾಗಿ ತಬರಕ್ ದೆವನ್ ಮತ್ತು ಅವರ ಮಗ ಮನು ದೆವನ್ ತಮ್ಮ ಸ್ವಂತ ಜಾಮೀನನ್ನು ಉಚಿತವಾಗಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 28ರ ಪಕ್ಕದಲ್ಲಿಯೇ ಇವರ ಜಾಮೀನು ಇದ್ದು, ಇದನ್ನು ಕಲ ತಿಂಗಳ ಹಿಂದೆ 12 ಲಕ್ಷ ನೀಡಿ ಇವರು ಖರೀದಿ ಮಾಡಿದ್ದರು. ಇಲ್ಲಿ ಉದ್ಯಮ ಮಾಡುವ ಆಶಯ ಅವರಿಗಿತ್ತು.
ಆದರೆ ಇದೀಗ ದೇಗುಲದ ವಿಸ್ತಾರಕ್ಕಾಗಿ ಭೂಮಿಯ ಅವಶ್ಯಕತೆ ಬಿದ್ದುದರಿಂದ ಈ ಭೂಮಿಯನ್ನು ಉಚಿತವಾಗಿ ಅವರು ದೇಗುಲಕ್ಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆವನ್, ‘ದಶಕಗಳಿಂದ ಪರಸ್ಪರ ಕಾಳಜಿಯೊಂದಿಗೆ ಇಲ್ಲಿ ನಾವು ವಾಸಿಸುತ್ತಿದ್ದೇವೆ, ಭೂಮಿ ನೀಡಿದ್ದು ಸೌಹಾರ್ದತೆಯ ಪ್ರತೀಕವಾಗಿದೆ, ಉತ್ತಮ ಕಾರ್ಯಕ್ಕಾಗಿ ಭೂಮಿ ನೀಡಿದ್ದೇವೆ. ಎಲ್ಲಾ ಧರ್ಮಗಳೂ ಒಂದೇ’ ಎಂದು ದೆವನ್ ಹೇಳಿದ್ದಾರೆ.
’ದೆವನ್ ತಮ್ಮ ಬೆಲೆಬಾಳುವ ಭೂಮಿ ನೀಡದೇ ಇರುತ್ತಿದ್ದರೆ ದೇಗುಲದ ಮುಖ್ಯದ್ವಾರದ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ, ಈ ಮುಸ್ಲಿಂ ಕುಟುಂಬದ ಉಪಕಾರದಿಂದ ಐತಿಹಾಸಿಕ ದೇಗುಲದ ಸುಂದರೀಕರಣ ಮಾಡಲು ನಮಗೆ ಸಾಧ್ಯವಾಯಿತು’ ಎಂದು ದೇಗುಲ ಸಮಿತಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.