ಮುಂಬಯಿ: ಜಲ್ಲಿಕಟ್ಟು ಹೋರಾಟವನ್ನು ತಮಿಳುನಾಡು ಗೆದ್ದುಕೊಂಡ ರೀತಿಯಲ್ಲೇ ಇದೀಗ ಮಹಾರಾಷ್ಟ್ರ ತನ್ನ ನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಎತ್ತಿನಗಾಡಿ ಓಟವನ್ನು ಕಾನೂನಾತ್ಮಕಗೊಳಿಸಲು ಮುಂದಾಗಿದೆ. ಅದಕ್ಕಾಗಿ ಮಸೂದೆಯೊಂದನ್ನು ಜಾರಿಗೊಳಿಸಲು ಅದು ಸಜ್ಜಾಗಿದೆ.
ಈ ಮಸೂದೆಯ ಕರುಡು ಪ್ರತಿಯನ್ನು ರಚಿಸುವುದಕ್ಕಾಗಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಉನ್ನತ ಮಟ್ಟದ ಸಂಸದೀಯ ಸಮಿತಿಯನ್ನು ರಚಿಸಿದ್ದಾರೆ.
ಈ ಸಾಲಿನ ಬಜೆಟ್ ಅಧಿವೇಶನದಲ್ಲೇ ಮಸೂದೆಯನ್ನು ಜಾರಿಗೊಳಿಸುವುದಾಗಿ ಪ್ರಾಣಿ ಸಂಗೋಪನ ಸಚಿವ ಮಹಾದೇವ್ ಜಂಕರ್ ತಿಳಿಸಿದ್ದಾರೆ.
ಜಲ್ಲಿಕಟ್ಟನ್ನು ಕಾನೂನಾತ್ಮಕಗೊಳಿಸಲು ತಮಿಳುನಾಡು ತಂದ ಮಸೂದೆಯ ಮಾದರಿಯಲ್ಲೇ ಈ ಮಸೂದೆ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.