ನವದೆಹಲಿ: ದೇಶದ ಹಲವು ಭಾಗಗಳು ಬಿಸಿಲಿನ ಪ್ರತಾಪಕ್ಕೆ ಕಂಗೆಟ್ಟು ಹೋಗಿವೆ. ಗುಜರಾತ್, ಆಂಧ್ರಪ್ರದೇಶ, ಹರಿಯಾಣ ಮತ್ತು ಪಂಜಾಬ್ಗಳು ಸೂರ್ಯನ ಕೆಂಗಣ್ಣಿಗೆ ಗುರಿಯಾದಂತೆ ಅತ್ಯಧಿಕ ಪ್ರಮಾಣದ ತಾಪಮಾನವನ್ನು ಎದುರಿಸುತ್ತಿವೆ.
ದೆಹಲಿಯಲ್ಲಿ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಗುಜರಾತ್ನ ಸೌರಾಷ್ಟ್ರ-ಕಚ್ಛ್ನಲ್ಲಿ 42..9 ಡಿಗ್ರಿ ಸೆಲ್ಸಿಯಸ್ ಇದೆ. ಅಹ್ಮದಬಾದ್ ನಗರದಲ್ಲಿ 41.8ಡಿಗ್ರಿ ಸೆಲ್ಸಿಯಸ್ ಇದೆ.
ಆಂಧ್ರದ ರಾಯಲಸೀಮೆಯಲ್ಲಿ ತಾಪಮಾನ 43.8 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವಿದೆ. ಪಂಜಾಬ್ನಲ್ಲೂ 37 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವಿದೆ.
ಬಿಸಿಲ ಜಳಕ್ಕೆ ಜನ ತಲೆ, ಮುಖ ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದು ಮನುಷ್ಯರನ್ನು, ಪ್ರಾಣಿಗಳನ್ನು ಸಂಕಷ್ಟಕ್ಕೆ ದೂಡಿದೆ.