ನವದೆಹಲಿ: ಪಸ್ತುತ ಅನಾಣ್ಯೀಕರಣದ ಹಿನ್ನೆಲೆಯಲ್ಲಿ ದೇಶದಾಯಂತ ೨೫ ರಾಜ್ಯಗಳ 1 ಮಿಲಿಯನ್ ವ್ಯಾಪಾರಸ್ಥರಿಗೆ ಡಿಜಿಟಲ್ ಪಾವತಿ ವ್ಯವಹಾರಗಳನ್ನು ನಡೆಸಲು ತರಬೇತಿ ನೀಡಲಾಗುವುದು ಎಂದು ಭಾರತದ ಬೀದಿ ಮಾರಾಟಗಾರರ ಸಂಘ (NASVI) ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಬೀದಿ ಮಾರಾಟಗಾರರ ಸಂಘ ನಗದು ರಹಿತ ವ್ಯವಹಾರ ಸಕ್ರಿಯಗೊಳಿಸಲು ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್ ಜೊತೆ NASVI ಕೈಜೋಡಿಸಿದೆ.
ಅನಾಣ್ಯೀಕರಣದಿಂದ ಬೀದಿಬದಿಯ ಮಾರಾಟಗಾರರು ನಿತ್ಯ ಜೀವನದಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಈ ಹಂತದಲ್ಲಿ ಮೊಬಿಕ್ವಿಕ್ ಜೊತೆಗಿನ ಸಹಭಾಗಿತ್ವದಿಂದ ಅವರಿಗೆ ಸಹಾಯ ಆಗಲಿದೆ ಎಂದು NASVI ಸ್ಥಾಪಕ ಅರಬಿಂದ್ ಸಿಂಗ್ ಹೇಳಿದ್ದಾರೆ.
ಮುಂದಿನ ಮೂರು ತಿಂಗಳ ಕಾಲ 1 ಮಿಲಿಯನ್ ಮಾರಾಟಗಾರರಿಗೆ ತರಬೇತಿ ನೀಡಲಾಗುತ್ತಿದ್ದು, ನಂತರ ದೇಶದ 24 ರಾಜ್ಯಗಳ 3 ಮಿಲಿಯನ್ ಮಾರಾಟಗಾರರಿಗೆ ತರಬೇತಿ ನೀಡಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.