×
Home About Us Advertise With s Contact Us

ವಿಐಪಿ, ಮಂತ್ರಿಗಳಿಗೂ ನೀರು ಸರಬರಾಜು ಸ್ಥಗಿತಗೊಳಿಸಿ

kejriwalನವದೆಹಲಿ: ದೆಹಲಿಯಲ್ಲಿ ನೀರಿನ ಸಮಸ್ಯೆ ಉದ್ಭವವಾದರೆ ಎಲ್ಲಾ ವಿವಿಐಪಿಗಳಿಗೂ ಹಾಗೂ ತನ್ನನ್ನು ಸೇರಿದಂತೆ ಎಲ್ಲಾ ಸಚಿವರುಗಳಿಗೂ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ನೀರು ಸರಬರಾಜು ಮಂಡಳಿಗೆ ತಿಳಿಸಿದ್ದಾರೆ.

ಆದರೆ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ನೀರು ಸರಬರಾಜು ಮಾಡಿ ಇದರಿಂದ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ನೀರಿನ ಸಮಸ್ಯೆಯನ್ನು ಕೇವಲ ದೆಹಲಿಯ ಜನಸಾಮಾನ್ಯರು ಮಾತ್ರ ಅನುಭವಿಸಬಾರದು, ವಿಐಪಿಗಳೂ ಅನುಭವಿಸಬೇಕು ಎಂದಿರುವ ಅವರು, ನೀರು ಹಂಚಿಕೆಯ ವಿಷಯದಲ್ಲಿ ದೆಹಲಿಗೆ ಸಹಕಾರ ನೀಡದ ಹರಿಯಾಣ ಸರ್ಕಾರದ ವಿರುದ್ಧ ಕಿಡಿಕಾರಿದರು.

ದೆಹಲಿ ಜನರಿಗೆ ಉಚಿತ ವಿದ್ಯುತ್ ಮತ್ತು ನೀರು ನೀಡುವ ಭರವಸೆಯನ್ನು ಕೇಜ್ರಿವಾಲ್ ನೀಡಿದ್ದರು. ಇದರಿಂದಾಗಿಯೇ ಅವರು ಶೇ.95ರಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಆದರೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವುದರಿಂದ ತನ್ನ ಭರವಸೆಯನ್ನು ಈಡೇರಿಸಲು ಕೇಜ್ರಿವಾಲ್‌ಗೆ ಕಷ್ಟವಾಗಲಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top