ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಮೌಲ್ಯದ ನೋಟುಗಳನ್ನು ನಿಷೇಧಿಸುವ ದಿಟ್ಟ ಹೆಜ್ಜೆಯನ್ನು ವಿದೇಶಿ ಮಾಧ್ಯಮಗಳು ಸ್ವಾಗತಿಸಿವೆ. ಈ ನಡುವೆ ಸಿಂಗಾಪುರ ಮೂಲದ ‘ದಿ ಇಂಡಿಪೆನ್ಡೆಂಟ್’ ವೆಬ್ಸೈಟ್ ಪ್ರಧಾನಿ ಮೋದಿ ಅವರನ್ನು ಸಿಂಗಾಪುರ ರಾಜ್ಯದ ಜನಕ ಲೀ ಕ್ವಾನ್ ಯೀನ್ ಅವರಿಗೆ ಹೋಲಿಸಿದೆ.
ಇನ್ನು ‘ಸ್ಪಷ್ಟ ಅವ್ಯವಸ್ಥೆಯ ಹೊರತಾಗಿಯೂ ಕೆಲಸ ಮುನ್ನಡೆಯುತ್ತಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.
ಭಾರತದಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಲು ಮೋದಿ ಅವರು ಲೀ ಕ್ವಾನ್ ಯೀನ್ ಅವರಂತೆ ನಡೆಯುತ್ತಿದ್ದಾರೆ ಎಂಬ ಶೀರ್ಷಿಕೆ ಅಡಿಯಲ್ಲಿ ಇದೊಂದು ‘ನಾಟಕೀಯ’ ನಡೆ ಎಂದು ದಿ ಇಂಡಿಪನ್ಡೆಂಟ್ ವೆಬ್ ಪೋರ್ಟಲ್ ವರ್ಣಿಸಿದೆ. ದೃಢ ಮಸ್ಸಿನಿಂದ ಮೋದಿ ಅವರು ನ.8ರಂದು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಭಾರತದಲ್ಲಿ ಹೊಸ ಲೀ ಕ್ವಾನ್ ಯೀವ್ ಜನನ ಆದಂತಾಗಿದೆ. ಇದು ಪ್ರಧಾನಿ ಪರಂಪರೆಯಲ್ಲಿ ಪ್ರತಿಫಲಿಸಲಿದೆ.
ಪ್ರಧಾನಿ ಮೋದಿ ಅವರ ಹಠಾತ್ ನಿರ್ಧಾರದಿಂದ ಅವರಿಗೆ ಹೊಸ ಗೌರವ ದೊರಕಿದಂತಾಗಿದೆ ಎಂದು ಅದು ಹೇಳಿದೆ.
ಲೀ ಅವರಂತೆ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಯಾವುದೇ ರಹಸ್ಯ ಅಡಗಿಲ್ಲ. ಕಳೆದ ವರ್ಷ ಲೀ ಅವರು ಮೃತಪಟ್ಟಿದ್ದು, ಗೌರವಾರ್ಪಣೆ ಸಂದರ್ಭ ‘ನಾಯಕರ ನಡುವಿನ ಸಿಂಹ’ ಎಂದು ಬಣ್ಣಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.