ನವದೆಹಲಿ : ಮಂಗಳವಾರ ಮಧ್ಯರಾತ್ರಿಯಿಂದ ರೂ. 500 ಮತ್ತು ರೂ. 1000 ಗಳ ನೋಟುಗಳ ಚಲಾವಣೆಗೆ ನಿಷೇಧ ಜಾರಿಮಾಡಲಾಗಿದೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ರೂ. 500 ಮತ್ತು ರೂ. 1000 ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಬದಲಾವಣೆ ಸಾಧ್ಯ. ಇದೀಗ ಸೂಚಿಸಿರುವ ಸ್ಥಳಗಳಲ್ಲೂ ಹಲವೆಡೆ ನೋಟುಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಇಂದು ಬ್ಯಾಂಕ್ ಮತ್ತು ಎಟಿಎಂಗಳು ಕೂಡಾ ಕಾರ್ಯ ನಿರ್ವಹಿಸದಿರುವ ಕಾರಣದಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಬ್ಯಾಂಕ್, ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್, ಸರ್ಕಾರಿ ಆಸ್ಪತ್ರೆ, ಪೋಸ್ಟ್ ಆಫೀಸ್ಗಳಲ್ಲಿ ಈಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮೋದಿ ಹೇಳಿದ್ದರು.
ಆದರೆ ಇದೀಗ ಸರ್ಕಾರಿ ಆಸ್ಪತ್ರೆ, ಪೆಟ್ರೋಲ್ ಬಂಕ್, ವಿಮಾನ ನಿಲ್ದಾಣ ಸೇರಿದಂತೆ ಸೂಚಿಸಿರುವ ಬಹುತೇಕ ಸ್ಥಳಗಳಲ್ಲಿ ರೂ. 500 ಮತ್ತು ರೂ. 1000 ಗಳ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಕೆಲ ಜನರು ಕಂಗಾಲಾಗಿದ್ದಾರೆ.
ನವೆಂಬರ್ 11 ರವರೆಗೆ ಸರ್ಕಾರ ಸೂಚಿಸಿರುವ ಸ್ಥಳಗಳಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸಲು ಸರ್ಕಾರವೇ ಹೇಳಿದ್ದರೂ, ಅಲ್ಲಿ ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ.
ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ಗಳಲ್ಲಿ ಇನ್ನೆರಡು ದಿನಗಳ ಕಾಲ ಅಂದರೆ ನವೆಂಬರ್ 11 ರವರೆಗೆ ಕಡ್ಡಾಯವಾಗಿ ರೂ. 500 ಮತ್ತು ರೂ. 1000 ನೋಟುಗಳನ್ನು ಸ್ವೀಕರಿಸಲೇಬೇಕು. ಈ ಬಗ್ಗೆ ಯಾರಾದರೂ ನಿಕಾಕರಿಸಿದರೆ ಅವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಹಳೆಯ ನೋಟುಗಳನ್ನು ನವೆಂಬರ್ 11 ರ ವರೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳುವಂತಿಲ್ಲ. ಒಂದೊಮ್ಮೆ ಯಾರಾದರೂ ಸ್ವೀಕರಿಸಲು ನಿರಾಕರಿಸಿದರೆ ನನಗೆ ದೂರು ಕೊಡಿ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.