ನವದೆಹಲಿ: 38 ವರ್ಷಗಳ ಹಿಂದೆ 1978ರ ತುರ್ತು ಪರಿಸ್ಥಿತಿ ಹಿಂಪಡೆದ ಬಳಿಕ ಅಂದಿನ ಭಾರತೀಯ ಜನತಾ ಪಕ್ಷದ ಪ್ರಧಾನಿ ಗುಜರಾತ್ನವರೇ ಆದ ಮೊರಾರ್ಜಿ ದೇಸಾಯಿ ಅವರು ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತಡೆಗಟ್ಟಲು ರೂ. 1000, ರೂ.5000 ಮತ್ತು ರೂ.10,000 ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರು. ಈಗ ಮತ್ತೆ ಭಾರತದ ಪ್ರಧಾನಿ ಗುಜರಾತ್ನ ನರೇಂದ್ರ ಮೋದಿ ಅವರು ಈ ನಿರ್ಧಾರ ಕೈಗೊಂಡಿದ್ದು, ಜನರಲ್ಲಿ ಮತ್ತೆ ಅದೇ ರೀತಿಯ ಅಚ್ಚರಿ ಮೂಡಿಸಿದೆ. ಅಲ್ಲದೇ ಅಟಲ್ಜಿ ಅವರ ಸಮಯದಲ್ಲಿ 1000 ರೂ. ನೋಟುಗಳನ್ನು ರದ್ದುಗೊಳಿಸಲಾಗಿತ್ತು.
2000 ರೂ. ನೋಟುಗಳನ್ನು ಜಾರಿಗೆ ತರುತ್ತಿರುವ ಮೊದಲ ಪ್ರಧಾನಿ ಮೋದಿಯಾಗಿದ್ದಾರೆ.
1978ರಲ್ಲಿ ಮೊರಾರ್ಜಿಯವರು ಜಾರಿ ಮಾಡಿದ ಕಾನೂನು, ಇದೀಗ ಮೋದಿ ಜಾರಿ ಮಾಡಿರುವ ರೀತಿಯಲ್ಲಿಯೇ ಇತ್ತು. ಮೊರಾರ್ಜಿಯವರು ಕೂಡ ಜನತೆಗೆ ಹಣ ಬದಲಾಯಿಸಲು ಬ್ಯಾಂಕು ಮತ್ತು ಸರ್ಕಾರಿ ಸಂಸ್ಥಾನಗಳಲ್ಲಿ ಜನವರಿ 24 ರವರೆಗೆ ಅವಕಾಶ ಕಲ್ಪಿಸಿದ್ದರು. ಅದೇ ರೀತಿ ಮೋದಿ ಕೂಡ ಮಾರ್ಚ್ವರೆಗೂ ಅವಕಾಶ ಕಲ್ಪಿಸಿದ್ದು, ಅದಕ್ಕೆ ಜನರು ಕೋರ್ಟ್ ಅಫಿಡ್ವಿಟ್ ಮಾಡಿಸುವ ಮೂಲಕ ಹಣ ಬದಲಾವಣೆಗೆ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.