ನವದೆಹಲಿ: ವಿದೇಶಿ ಭಾರತೀಯ ನಾಗರಿಕರ ಮತದಾನ ಪ್ರಕ್ರಿಯೆ ಮತ್ತು ನೋಂದಣಿ ಕುರಿತು ಮಾಹಿತಿ ಪಡೆದು ಜಾಗೃತಿ ಮೂಡಿಸಲು ಭಾರತದ ಚುನಾವಣಾ ಆಯೋಗ (ಇಸಿಐ) ಆನ್ಲೈನ್ ಸಮೀಕ್ಷೆ ಆರಂಭಿಸಿದೆ.
ವಿದೇಶಿ ಮತದಾರರ ನೋಂದಣಿ ಮತ್ತು ಚುನಾವಣೆಯ ಭಾಗವಹಿಸುವಿಕೆ ಪ್ರಮಾಣವದ ಬಗ್ಗೆ ಅಧ್ಯಯನ ನಡೆಸಲು ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಟಾಟಾ ಸಂಸ್ಥೆಯ ಸಮಾಜ ವಿಜ್ಞಾನದ ಸಹಯೋಗದೊಂದಿಗೆ ಚುನಾವಣಾ ಆಯೋಗ ಈ ಸಮೀಕ್ಷೆ ಆರಂಭಿಸಿದ್ದು, ವಿದೇಶಿ ಮತದಾರರ ಅಭಿಪ್ರಾಯ ಮತ್ತು ಮತದಾನದ ಆದ್ಯತೆಗಳನ್ನು ತಿಳಿದುಕೊಳ್ಳಲು ಸಹಾಯಕವಾಗಲಿದೆ. ಅಲ್ಲದೇ ಮತದಾನದ ವಿಧಾನಗಳ ಬಗ್ಗೆ ಅಧ್ಯಯನ ನಡೆಸಿ ಇದರ ಮಾಹಿತಿಗಳನ್ನು ಸರ್ಕಾರಕ್ಕೆ ನೀಡಲಿದೆ.
ಚುನಾವಣಾ ಆಯೋಗ ‘ಎವ್ರಿ ಇಂಡಿಯನ್ ವೋಟ್ ಕೌಂಟ್ಸ್’ ಎಂಬ ಆನ್ಲೈನ್ ಸ್ಪರ್ಧೆಯನ್ನೂ ಆರಂಭಿಸಿದ್ದು, ಸ್ಪರ್ಧಿಗಳು ವಿವಿಧ ವಿಭಾಗಗಳಾದ ಹಾಡುಗಳು, ಘೋಷಣೆಗಳು, ಫೋಟೋಗಳು, ಕಿರು ಚಿತ್ರಗಳು, ಆಡುಯೋ ವಿಷ್ಯುವಲ್, ಪ್ರಬಂಧಗಳ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದು.
ಸ್ಪರ್ಧೆಯಲ್ಲಿ ಜಯಿಸಿದ ಸ್ಪರ್ಧಿಗಳು ಭಾರತ ಪ್ರವಾಸದ ಅವಕಾಶ ಮತ್ತು ಮುಂದಿನ ವರ್ಷ ಜನವರಿ 25ರಂದು ನಡೆಯಲಿರುವ ರಾಷ್ಟ್ರೀಯ ಮತದಾರರ ದಿನದಂದು ಚುನಾವಣಾ ಆಯೋಗದಿಂದ ಜೀವಮಾನ ಗೌರವ ಪಡೆಯುವ ಅವಕಾಶ ಹೊಂದಲಿದ್ದಾರೆ.
ಆನ್ಲೈನ್ ಸಮೀಕ್ಷೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು, ಆನ್ಲೈನ್ ಸ್ಪರ್ಧೆಗಳು ನವೆಂಬರ್ ತಿಂಗಳಲ್ಲಿ ನಡೆಯಲಿವೆ.
ಇದರ ಮಾಹಿತಿ www.everyvotecounts.inನಲ್ಲಿ ದೊರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.