ಭುಜ್: ಗುಜರಾತ್ನ ಕಚ್ ಜಿಲ್ಲೆಯ ಸರ್ ಕ್ರೀಕ್ ಪ್ರದೇಶದ ಪಾಕಿಸ್ಥಾನ ಸಮುದ್ರ ಗಡಿಯಲ್ಲಿ 9 ಜನರಿದ್ದ ಪಾಕಿಸ್ಥಾನದ ಬೋಟ್ನ್ನು ಬಿಎಸ್ಎಫ್ ಪಡೆ ಬುಧವಾರ ವಶಪಡಿಸಿಕೊಂಡಿದೆ.
ಸರ್ ಕ್ರೀಕ್ ಪ್ರದೇಶದಲ್ಲಿ ಗಸ್ತು ತಿರುತ್ತಿದ್ದ ಸಂದರ್ಭ 9 ಜನರಿದ್ದ ಪಾಕಿಸ್ಥಾನ ದೋಣಿಯನ್ನು ಗಮನಿಸಿದ್ದು, ೯ ಮಂದಿ ಸಹಿತ ದೋಣಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜಿ-43 ಪಿಲ್ಲರ್ನ ಚೌಹಾಣ್ ನಾಲಾ ಬಳಿ ದೋಣಿತನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿ ತಿಳಿಸಿದ್ದಾರೆ.
ದೋಣಿಯಲ್ಲಿ ಮೀನು, ಮೀನುಗಾರಿಕೆ ಸಾಧನಗಳು ಹೊರತುಪಡಿಸಿ ಇತರ ಆಕ್ಷೇಪಾರ್ಹ ವಸ್ತುಗಳು ಯಾವುದನ್ನು ವಶಪಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ಜನರು ಪಾಕಿಸ್ಥಾನ ಪರ ಬೇಹುಗಾರಿಕೆ ನಡೆಸುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.