ನವದೆಹಲಿ: ಭಾರತದಲ್ಲಿನ ‘ಅಸ್ಪೃಶ್ಯತೆ’ ವಿರುದ್ಧದ ಕ್ರಾಂತಿಕಾರಿ ಹೋರಾಟಗಾರ ಚಂದ್ರ ಭನ್ ಪ್ರಸಾದ್ ಸಿದ್ಧ ಆಹಾರ ಮಾರಾಟ ಆರಂಭಿಸುವ ಮೂಲಕ ದಶಕಗಳಿಂದ ಕಂಡು ಬರುತ್ತಿರುವ ಜಾತಿ ತಾರತಮ್ಯಕ್ಕೆ ಸವಾಲೊಡ್ಡಿದ್ದಾರೆ.
ಚಂದ್ರ ಭನ್ ಪ್ರಸಾದ್ ಉತ್ತರ ಭಾರತದಲ್ಲಿ ದಲಿತ ಪಾಸಿ ಕುಟುಂಬದಲ್ಲಿ ಜನಿಸಿದ್ದು, ಅವರ ಪತ್ನಿ ಮಸಾಲೆ ಪದಾರ್ಥ, ಉಪ್ಪಿನಕಾಯಿ ಮತ್ತು ಧಾನ್ಯಗಳ ಮಾರಾಟದ ‘ದಲಿತ್ ಫುಡ್ಸ್’ ಆನ್ಲೈನ್ ಮಾರಾಟ ಆರಂಭಿಸಿದ್ದಾರೆ.
ನಾನು ಪ್ರತ್ಯೇಕಿಸಲ್ಪಟ್ಟ ಅಸ್ಪೃಶ್ಯ ಸಮಾಜದಲ್ಲಿ ಜನಿಸಿದೆ, ಆದರೆ ಭಾರತ ಈಗ ಬದಲಾಗಿದೆ. ನನ್ನ ಹೊಸ ಆಫರ್ಗೆ ಎಷ್ಟು ಜನ ಪ್ರತಿಕ್ರಿಯಿಸುತ್ತಾರೆ ಎಂದು ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.
1955ರಲ್ಲಿ ಜಾತಿ ಪದ್ಧತಿಯನ್ನು ಭಾರತ ನಿಷೇಧಿಸಿದರೂ ಶತಮಾನಗಳ ಹಳೆಯ ದಲಿತರು, ಕೆಳ ವರ್ಗದ ಸಮುದಾಯಗಳ ವಿರುದ್ಧದ ಜಾತಿ ಪದ್ಧತಿ ಇಂದಿಗೂ ಮುಂದುವರೆದಿದೆ.
‘ದಲಿತ್ ಫುಡ್ಸ್’ ಮೆಣಸಿನ ಪುಡಿ, ಅರಶಿನ ಪುಡಿ, ಮಾವಿನ ಉಪ್ಪಿನಕಾಯಿ, ಬಾರ್ಲಿ ಹಿಟ್ಟು, ಮಸೂರ್ ಸೇರಿದಂತೆ ಮಸಾಲೆ ಮತ್ತು ಧಾನ್ಯಗಳ ಮಾರಾಟ ಮಾಡುತ್ತಿದ್ದು, ಇನ್ನಷ್ಟು ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ.
ಆಹಾರ ಕಲಬೆರಕೆ ಒಂದು ದೊಡ್ಡ ಸಮಸ್ಯೆಯಾಗಿದ್ದು, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಪ್ರಸಾದ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.