ಬೀಜಿಂಗ್: ಮುಂದಿನ ವರ್ಷಗಳಲ್ಲಿ ಮಂಗಳಕ್ಕೆ ಉಪಗ್ರಹ ಕಳುಹಿಸುವ ಉದ್ದೇಶದಿಂದ ಚೀನಾ ತನ್ನ ಸೇನಾ ಬೆಂಬಲಿತ ಬಾಹ್ಯಾಕಾಶ ಕೇಂದ್ರ ಟಿಯಾಂಗೊಂಗ್ 2 ಉದ್ಘಾಟನೆ ಮಾಡಿದೆ.
ಗೋಬಿ ಮರುಭೂಮಿಯ ಅಂಚಿನಲ್ಲಿರುವ ಜ್ಯುಕ್ವಾನ್ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 7 ರಾಕೆಟ್ ಮೂಲಕ ಟಿಯಾಂಗೊಂಗ್ 2 ಉಪಗ್ರಹ ಉಡಾವಣೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ತಿಂಗಳು ಶೆನ್ಝು 11 ಉಪಗ್ರಹವನ್ನು ಅಂತರಿಕ್ಷಕ್ಕೆ ಬಿಡುಗಡೆ ಮಾಡುವ ಯೋಜನೆ ಇದ್ದು, ಇಬ್ಬರು ವಿಜ್ಞಾನಿಗಳು ಒಂದು ತಿಂಗಳ ಕಾಲ ಇದರಲ್ಲಿ ತೆರಳಲಿದ್ದಾರೆ ಎಂದು ತಿಳಿದು ಬಂದಿದದೆ.
ಅಂತರಿಕ್ಷದಲ್ಲಿ ತಂಗುವಿಕೆ, ಇಂಧನ ಮರುಸೂಸಲು ಮತ್ತು ಪರೀಕ್ಷಿಸಲು, ಔಷಧ ಹಾಗೂ ಬಾಹ್ಯಾಕಾಶ ಸಂಬಂಧಿತ ತಂತ್ರಜ್ಞಾನದ ಪ್ರಯೋಗಗಳಿಗೆ ಟಿಯಾಂಗೊಂಟ್ 2 ಬಳಸಲಾಗುವುದು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.