ನವದೆಹಲಿ: ಭಾರತದಲ್ಲಿ ಎಲ್ಲ ವಿಮಾನಗಳಲ್ಲೂ ವಿಮಾನ ಪ್ರಯಾಣಿಕರು ಚೆಕ್-ಇನ್ ಬ್ಯಾಗ್ಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ಫೋನ್ ಒಯ್ಯುವುದನ್ನು ನಾಗರಿಕ ವಿಮಾನಯಾನ ಡಿರೆಕ್ಟರ್ ಜನರಲ್ (ಡಿಜಿಸಿಎ) ನಿಷೇಧಿಸಿದ್ದಾರೆ.
ವಿಮಾನ ಪ್ರಯಾಣಿಕರು ಈ ಮೊಬೈಲ್ಗಳನ್ನು ಕೇವಲ ತಮ್ಮ ಹ್ಯಂಡ್ಬ್ಯಾಂಗ್ಗಳಲ್ಲಿ ಪ್ರಯಾಣದ ವೇಳೆ ಸ್ವಿಚ್ ಆಫ್ ಮಾಡಿ ಒಯ್ಯಬಹುದಾಗಿದೆ ಎಂದು ಅದು ತಿಳಿಸಿದೆ.
ವಿಮಾನ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಯಾನಗಳಿಗೆ ಈ ಸಲಹೆ ನೀಡಲಾಗಿದೆ. ವಿಮಾನಗಳಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಬಳಕೆ ಮತ್ತು ಚಾರ್ಜ್ ಮಾಡುವಂತಿಲ್ಲ. ಅವುಗಳನ್ನು ಚೆನ್-ಇನ್ ಬ್ಯಾಗ್ಗಳಲ್ಲಿ ಒಯ್ಯುವಂತಿಲ್ಲ ಎಂದು ಸರ್ಕಾರದ ಕಚೇರಿಯ ನಾಗರಿಕ ವಿಮಾನಯಾನ ನಿರ್ದೇಶಕರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡ ಅಥವಾ ಸ್ಫೋಟಗೊಂಡಿರುವ ಬಗ್ಗೆ ಗಮನಿಸಿದ ಬಳಿಕ ಕಳೆದ ವಾರ ಸ್ಯಾಮ್ಸಂಗ್ ಈ ಮೊಬೈಲ್ಗಳನ್ನು ಹಿಂಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.