ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 14ನೇ ಏಷಿಯನ್-ಭಾರತ (ASEAN) ಸಭೆ ಹಾಗೂ 11ನೇ ಈಸ್ಟ್ ಏಷ್ಯಾ ಸಭೆಯಲ್ಲಿ ಪಾಲ್ಗೊಳ್ಳಲು ಲಾವೋಸ್ಗೆ ತೆರಳಲಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ಏಷಿಯನ್ ಮತ್ತು ಈಸ್ಟ್ ಏಷ್ಯಾ ಸಭೆ ಬುಧವಾರ ಆರಂಭಗೊಳ್ಳಲಿದ್ದು, ಭಾರತ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಭೌತಿಕ ಮತ್ತು ಡಿಜಿಟಲ್ ಸಂಪರ್ಕ ಹಾಗೂ ಪರಸ್ಪರ ಪ್ರಯೋಜನ ಪಡೆಯಲು ಆಂತರಿಕ ಸಂಪರ್ಕ ಬಯಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಏಷಿಯನ್ ಭಾರತದ ‘ಆ್ಯಕ್ಟ್ ಈಸ್ಟ್’ ನೀತಿಯ ಒಂದು ಪ್ರಮುಖ ಪಾಲುದಾರ. ಇದು ನಮ್ಮ ಈಶಾನ್ಯ ವಲಯಗಳ ಅಭಿವೃದ್ಧಿಗೆ ಅಗತ್ಯ ಎಂದು ಈ ವೇಳೆ ಮೋದಿ ಹೇಳಿದ್ದಾರೆ.
ಏಷಿಯನ್ ಜೊತೆಗಿನ ಪಾಲುದಾರಿಕೆ ನಮ್ಮ ಭದ್ರತಾ ಹಿತಾಸಕ್ತಿಗಳ ರಕ್ಷಣೆ ಮತ್ತು ಪ್ರಚಾರ ಹಾಗೂ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಭದ್ರತಾ ಸವಾಲುಗಳನ್ನು ಎದುರಿಸಲು ಅಗತ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಈಸ್ಟ್ ಏಷ್ಯಾ ಸಭೆ ಏಷ್ಯಾ-ಪ್ಯಾಸಿಫಿಕ್ ಪ್ರದೇಶದ ಸವಾಲುಗಳು ಮತ್ತು ಅವಕಾಶಗಳನ್ನು ಚರ್ಚಿಸಲು ಪ್ರಧಾನ ವೇದಿಕೆಯಾಗಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧಗಳು ಐತಿಹಾಸಿಕ ಎಂದು ಹೇಳಿದ ಅವರು, ಅವರೊಂದಿಗೆ ನಮ್ಮ ವರ್ತನೆ ಮತ್ತು ಸಂಬಂಧಗಳಿಗೆ ಒಂದು ಪದದಲ್ಲಿ ಹೇಳುವುದಾದರೆ ಅದು ‘ಸಂಪರ್ಕ’ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.