Thursday, August 25th, 2016
Admin
ಲಕ್ನೋ : ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಇಥವಾದಲ್ಲಿ ಮುಘಲ್-ಎ-ಅಜಮ್ ಥೀಮ್ ಪಾರ್ಕ್ನ್ನು ಸ್ಥಾಪನೆ ಮಾಡಲು ಮುಂದಾಗಿದೆ.
ಇಥವಾದ ಲಯನ್ ಸಫಾರಿ ಸಮೀಪ ಬಾಲಿವುಡ್ ಸಿನಿಮಾ ಮುಘಲ್-ಎ-ಆಜಂನ ಥೀಮ್ನ್ನೊಳಗೊಂಡ ಪಾರ್ಕ್ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಅಲ್ಲಿನ ಸರಕಾರದ ವಕ್ತಾರರು ತಿಳಿಸಿದ್ದಾರೆ.
ಈ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಪ್ರಕ್ರಿಯಗಳನ್ನು ಆರಂಭಿಸುವಂತೆ ಸಿಎಂ ಅಖಿಲೇಶ್ ಯಾದವ್ ಅವರು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದ್ದಾರೆ.
ಕೇವಲ ಸಿನಿಮಾದ ಥೀಮ್ ಮಾತ್ರವಲ್ಲದೆ, ಅದರ ನಿರ್ದೇಶಕ, ನಿರ್ಮಾಪಕರಾದ ಕೆ. ಆಸೀಫ್ ಅವರ ಬಗ್ಗೆಯೂ ಈ ಪಾರ್ಕ್ ಬೆಳಕು ಚೆಲ್ಲಲಿದೆ.
ಈ ಪ್ರದೇಶಕ್ಕೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡುವುದೇ ಈ ಪಾರ್ಕ್ ಸ್ಥಾಪನೆಯ ಹಿಂದಿರುವ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.