ನವದೆಹಲಿ: ಪಾಕಿಸ್ಥಾನ ತನ್ನ ಪೂರ್ವ ಹಾಗೂ ಪಶ್ಚಿಮದ ದೇಶಗಳ ನಡುವೆ ಮಿಲಿರಿ ಸಹಕಾರದ ಬಗ್ಗೆ ಜಾಕರೂಕವಾಗುವ ನಡುವೆಯೂ ಭಾರತ ಇಸ್ಲಾಮಿಕ್ ಬಂಡುಕೋರರ ವಿರುದ್ಧ ಹೋರಾಡಲು ಹೆಚ್ಚಿನ ಶಸ್ತ್ರಾಸ್ತ್ರ ನೀಡಲಿದೆ ಎಂದು ಭಾರತದ ಅಫ್ಘಾನಿಸ್ಥಾನ ನಿಯೋಗ ತಿಳಿಸಿದೆ.
ಭಾರತ ಕಳೆದ 15 ವರ್ಷದಲ್ಲಿ ಅಫ್ಘಾನಿಸ್ಥಾನಕ್ಕೆ 2 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದೆ. ಆದರೆ ಪಾಕಿಸ್ಥಾನದ ವಿರುದ್ಧ ಹೋರಾಡಲು ಹೆಚ್ಚಿನ ಮಟ್ಟದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ.
ತಾಲಿಬಾನ್ ಮೂಮೆಂಟ್ ಉರುಳಿದ ಬಳಿಕ ಕಳೆದ ಡಿಸೆಂಬರ್ನಲ್ಲಿ ಭಾರತ ಕಾಬೂಲ್ಗೆ 4 ಯುದ್ಧ ವಿಮಾನಗಳನ್ನು ರವಾನಿಸಿದೆ.
ಪ್ರಾದೇಶಿಕ ಭದ್ರತೆ ಕುಸಿಯುತ್ತಿದ್ದು, ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪುಗಳ ವಿರುದ್ಧ ಹೋರಾಡಲು ಅಫ್ಘಾನ್ ಸೇನೆಗೆ ಮಿಲಿಟರಿ ಉಪಕರಣಗಳ ಅಗತ್ಯವಿತ್ತು ಎಂದು ಭಾರತದ ಅಫ್ಘಾನ್ ರಾಯಭಾರಿ ಶಾಯಿದಾ ಮೊಹಮ್ಮದ್ ಅಬ್ದಾಲಿ ಹೇಳಿದ್ದಾರೆ.
ಅಮೇರಿಕಾ ಮಿಲಿಟರಿ ಜೊತೆ ಸಮಾಲೋಚನೆಯ ಬಳಿಕ ಮಿಲಿಟರಿ ಉಪಕರಣಗಳ ಪಟ್ಟಿ ಸಲ್ಲಿಸಲು ಅಫ್ಘಾನ್ ಸೇನಾ ಮುಖ್ಯಸ್ಥ ಜನರಲ್ ಕದಂ ಶಾ ಶಾಹಿಂ ಆಗಸ್ಟ್ 29ರಂದು ಆಗಮಿಸುವ ಸಾಧ್ಯತೆ ಇದೆ ಎಂದು ಭಾರತೀಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಸೇನಾ ತುಕಡಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸಾಗಿಸುವMi- 25s ಹೆಲಿಕಾಪ್ಟರ್ಗಳು, ಅಫ್ಘಾನ್ ವಾಯುಪಡೆಯಲ್ಲಿ ಅಸ್ತಿತ್ವದಲ್ಲಿರುವ ರಷ್ಯನ್ ವಿಮಾನಗಳ ಬಿಡಿಭಾಗಗಳನ್ನು ಒಳಗೊಂಡಿದೆ.
ಆದರೆ ಭಾರತ ಮತ್ತು ಅಫ್ಘಾನಿಸ್ಥಾನದ ನಡುವಿನ ಸಹಕಾರ, ಸಂಬಂಧಗಳು ಪಾಕಿಸ್ಥಾನಕ್ಕೆ ಭಯ ಹುಟ್ಟಿಸುವುದರಲ್ಲಿ ಸಂಶಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.