ಇಂಫಾಲ : ಸಾಮಾಜಿಕ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ತಮ್ಮ 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಅವರಂತೆ ಮಣಿಪುರದ ಮತ್ತೋರ್ವ ಮಹಿಳೆ ಅಮರಣಾಂತ ಉಪವಾಸವನ್ನು ಆರಂಭಿಸಿದ್ದಾರೆ.
ಎರಡು ಮಕ್ಕಳ ತಾಯಿ ಆಗಿರುವ 32 ವರ್ಷದ ಅರಂಬಮ್ ರಬಿತ ಲೀಮಾ ಅವರು ಶರ್ಮಿಳಾರಂತೆ ಮಣಿಪುರದಲ್ಲಿ ಹೇರಲಾಗಿರುವ ಶಸ್ತ್ರಾಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ವಿರೋಧಿಸಿ ಉಪವಾಸ ಆರಂಭಿಸಿದ್ದಾರೆ.
ಇಂಫಾಲ ಪಶ್ಚಿಮ ಜಿಲ್ಲೆಯ ಕಮ್ಯೂನಿಟಿ ಹಾಲ್ನಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಅವರು ಉಪವಾಸ ಆರಂಭಿಸಿದ್ದು, ಸಾಯುವ ತನಕ ಉಪವಾಸ ನಿಲ್ಲಿಸಲಾರೆ ಎಂದಿದ್ದಾರೆ.
ಶಸ್ತ್ರಾಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ವಾಪಾಸ್ ಪಡೆಯುವುದು ಮಾತ್ರವಲ್ಲ, ಮಣಿಪುರದಲ್ಲಿ ಇನ್ನರ್ ಲೈನ್ ಪರ್ಮಿಟ್ ನೀಡಬೇಕು ಎಂಬುದು ನನ್ನ ಆಗ್ರಹವಾಗಿದೆ. ಇದು ಈಡೇರುವವರೆಗೂ ಉಪವಾಸ ನಿಲ್ಲಿಸಲಾರೆ ಎಂದಿದ್ದಾರೆ.
ಆದರೆ ವಿವಿಧ ಮಹಿಳಾ ಪರ ಸಂಘಟನೆಗಳು ಅವರಿಗೆ ಉಪವಾಸ ನಡೆಸದಂತೆ ಮನವಿ ಮಾಡಿಕೊಳ್ಳುತ್ತಿದ್ದು, ಅವರ ಇಬ್ಬರು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವಂತೆ ಕಿವಿ ಮಾತು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.