Monday, August 8th, 2016
News13
ನವದೆಹಲಿ: ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದ ಮಾಜಿ ನಾಯಕ ಹಾಗೂ ಪದ್ರೌನ ಶಾಸಕ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಇತರ ನಾಯಕರು ಸೋಮವಾರ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
ಬಿಎಸ್ಪಿ ರಾಜ್ಯಾಧ್ಯಕ್ಷ ಮೌರ್ಯ, ಶಿವಪುರ ಶಾಸಕ ಉದಯ ಲಾಲ್ ಹಾಗೂ ಇತರ ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.
ಈ ವೇಳೆ ಮಾತನಾಡಿದ ಮೌರ್ಯ ರಾಜ್ಯದ್ಯಂತ ಪಕ್ಷದ ಒಬಿಸಿ ವಿಭಗವನ್ನು ಬಲಪಡಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.
ಮೌರ್ಯ ಅವರ ಬಿಜೆಪಿ ಸೇರ್ಪಡೆಯಿಂದ ರಾಜ್ಯದ ಅತೀ ದೊಡ್ಡ ಗುಂಪುಗಳಾದ ಕುಶ್ವಾರ-ಮೌರ್ಯ ಜಾತಿಯ ಅಭಿವೃಧ್ಧಿಯಾಗಲಿದೆ ಎಂದು ನಂಬಲಾಗಿದೆ.