ನವದೆಹಲಿ: ತನ್ನ ಮೊದಲ ಟೌನ್ಹಾಲ್ ಶೈಲಿಯ ಸಮಾರಂಭದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಸಂಪರ್ಕ ಮಾಡಲಿದ್ದಾರೆ. ಆಗಸ್ಟ್ 6ರ ಶನಿವಾರದಂದು ಈ ಕಾರ್ಯಕ್ರಮ ಜರುಗಲಿದೆ.
ಈ ಮೆಗಾ ಇವೆಂಟ್ನಲ್ಲಿ ಮೊಬೈಲ್ ಬಳಕೆದಾರರು ಪ್ರಧಾನಿಯವರ ವೆಬ್ಸೈಟ್ನ್ನು ಸದಾ ಕನೆಕ್ಟ್ ಆಗುವಂತೆ ಮಾಡುವ ಹೊಸ ಪಿಎಂಓ ಆ್ಯಪ್ ಒಂದಕ್ಕೆ ಚಾಲನೆ ನೀಡಲಾಗುತ್ತಿದೆ.
ತನ್ನ ಎರಡನೇ ವರ್ಷಾಚರಣೆಯನ್ನು ಸಂಭ್ರಮಿಸುವ ಸಲುವಾಗಿ ಸರ್ಕಾರ-ನಾಗರಿಕರ ಸಂಪರ್ಕ ವೇದಿಕೆ MyGov- ಮೆಗಾ ಇವೆಂಟ್ನ್ನು ಆಯೋಜನೆ ಮಾಡುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಪ್ಯಾನೆಲ್ ಡಿಸ್ಕಶನ್, ಸೆಷನ್ಗಳು ಈ ವೇಳೆ ಜರುಗಲಿದ್ದು, ಇದು’ಡು, ಡಿಸ್ಕಸ್, ಡೆಸಿಮಿನೇಟ್’ ಥೀಮ್ನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.