ನವದೆಹಲಿ: ಬಿಜೆಪಿ ಸದಸ್ಯರು ದೆಹಲಿ ಸರ್ಕಾರದ ಸಮಬೆಸ ನಿಯಮವನ್ನು ನಿರಂತರವಾಗಿ ವಿರೋಧಿಸುತ್ತಲೇ ಬರುತ್ತಿದ್ದಾರೆ, ಬುಧವಾರ ಸಂಸದರೊಬ್ಬರು ಕುದುರೆಯ ಮೇಲೆ ಕೂತು ಸಂಸತ್ತಿಗೆ ಆಗಮಿಸುವ ಮೂಲಕ ತಮ್ಮ ಪ್ರಬಲ ವಿರೋಧವನ್ನು ತೋರ್ಪಡಿಸಿದ್ದಾರೆ.
ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ ಅವರು ಇಂದು ಬೆಳಿಗ್ಗೆ ಲೋಕಸಭೆಗೆ ಕಾರಿನ ಬದಲು ಕುದುರೆಯ ಮೂಲಕ ಆಗಮಿಸಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾದುದ್ದು ಮಾತ್ರವಲ್ಲ, ಆಕರ್ಷಣೆಯ ಕೇಂದ್ರ ಬಿಂದುವೂ ಆದರು.
ಸಮಬೆಸ ನಿಯಮ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತಿದ್ದು, ನಿಮಯದಿಂದ ಸಂಸತ್ತಿಗೆ ಆಗಮಿಸುವ ಸಂಸದರಿಗೆ ರಿಯಾಯಿತಿ ಕೊಡದೆ ಅವಮಾನವನ್ನೂ ಮಾಡಲಾಗಿದೆ ಎಂದು ಶರ್ಮಾ ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.