×
Home About Us Advertise With s Contact Us

ಕಾಂಗ್ರೆಸ್‌ನ ರೇಣುಕಾ ಚೌಧರಿ ವಿರುದ್ಧ ಲಂಚ ಪ್ರಕರಣ

renukaಹೈದರಾಬಾದ್: ಕಾಂಗ್ರೆಸ್‌ಗೆ ಮತ್ತೊಂದು ಮುಖಭಂಗವಾಗಿದೆ. ಅದರ ಹಿರಿಯ ನಾಯಕಿ ರೇಣುಕಾ ಚೌಧುರಿಯವರ ವಿರುದ್ಧ ಹೈದರಾಬಾದ್ ಪೊಲೀಸರು ಲಂಚ ಪ್ರಕರಣವನ್ನು ದಾಖಲಿಸಿದ್ದಾರೆ.

ವ್ಯಕ್ತಿಯೊಬ್ಬರಿಗೆ ವಿಧಾನಸಭಾ ಚುನಾವಣೆಯ ಟಿಕೆಟ್ ಭರವಸೆ ನೀಡಿ ಅವರಿಂದ 1.1೦ ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪ ರೇಣುಕಾ ಅವರ ವಿರುದ್ಧ ಕೇಳಿ ಬಂದಿದೆ.

ಬಿ.ಕಲಾವತಿ ಎಂಬುವವರು ರೇಣುಕಾ ವಿರುದ್ಧ ಹೈಕೋರ್ಟ್‌ಗೆ ಪಿಟಿಷನ್ ಹಾಕಿದ್ದರು. ‘ತಮ್ಮ ಪತಿ ರಾಮ್‌ಜೀ ನಾಯ್ಕ್ ವ್ಯಾರಾ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯ ಟಿಕೆಟ್ ಕೊಡುವ ಭರವಸೆ ನೀಡಿ ರೇಣುಕಾ 10.1೦ ಕೋಟಿ ಲಂಚ ಪಡೆದುಕೊಂಡಿದ್ದಾರೆ. ಆದರೆ ಟಿಕೆಟ್ ನೀಡದೆ ವಂಚಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಅಲ್ಲದೇ ತನ್ನ ಪತಿ ಸಾಲ ಮಾಡಿ ಹಣ ಕೊಟ್ಟಿದ್ದು, ಆ ಸಾಲದ ಒತ್ತಡದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಕಲಾವತಿ ಆರೋಪಿಸಿದ್ದಾರೆ. ಆದರೆ ರೇಣುಕಾ ಈ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಹೈದರಾಬಾದ್ ಹೈಕೋರ್ಟ್ ಸೂಚನೆಯ ಮೇರೆಗೆ ಇದೀಗ ರೇಣುಕಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Tags: ,

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top