Tuesday, 20th February 2018
×
Home About Us Advertise With s Contact Us

ಜಮ್ಮುವಿನಲ್ಲಿ ಉಗ್ರರ ದಾಳಿ: 2 ಬಲಿ

terror1ಜಮ್ಮು: ಜಮ್ಮು ಪ್ರದೇಶದ ಕತ್ವು ಜಿಲ್ಲೆಯ ರಾಜ್‌ಭಾಗ್ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ಬೆಳಿಗ್ಗೆ ಉಗ್ರರ ದಾಳಿ ನಡೆದಿದೆ. ಸ್ವಯಂಚಾಲಿತ ಶಸ್ತ್ರ, ಗ್ರೆನೈಡ್ ಮೂಲಕ ಠಾಣೆಯ ಮೇಲೆ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಇದು ಪಾಕಿಸ್ಥಾನ ಬೆಂಬಲಿತ ಉಗ್ರರ ಕೃತ್ಯ ಎಂದು ಶಂಕಿಸಲಾಗಿದ್ದು, ಠಾಣೆಯ ಒಳನುಗ್ಗಿರುವ ಉಗ್ರರು ಪೊಲೀಸರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಮಿಲಿಟರಿ ಸಮವಸ್ತ್ರ ಧರಿಸಿ ಈ ಕೃತ್ಯ ಎಸಗಲಾಗಿದೆ. ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ರಕ್ಷಣಾಪಡೆಗಳನ್ನು ನಿಯೋಜಿಸಲಾಗಿದೆ.

ಸಿಆರ್‌ಪಿಎಫ್‌ನ 7 ಸಿಬ್ಬಂದಿಗಳು, ಒಬ್ಬ ಪೊಲೀಸ್ ಮತ್ತು ಒಬ್ಬ ನಾಗರಿಕ ಘಟನೆಯಲ್ಲಿ ಗಾಯಗೊಂಡಿದ್ದಾರೆ.

Tags: ,

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top