×
Home About Us Advertise With s Contact Us

ಬಾಂಗ್ಲಾ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಮೆಲ್ಬೋರ್ನ್: ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. ಗುರುವಾರ ನಡೆದ ಎರಡನೇ ಕ್ವಾಟರ್‌ಫೈನಲ್‌ನಲ್ಲಿ ಬಾಂಗ್ಲಾವನ್ನು ಬರೋಬ್ಬರಿ 109 ರನ್‌ಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

Win

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್(137) ಅವರ ಅಮೋಘ ಶತಕದ ನೆರವಿನೊಂದಿಗೆ 302 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಶಿಖರ್ ಧವನ್ 3೦, ವಿರಾಟ್ ಕೊಹ್ಲಿ 3 ಮತ್ತು ಅಂಜಿಕ್ಯಾ ರಹಾನೆ 19 ರನ್‌ಗಳಿಸಿದರು. ಸುರೇಶ್ ರೈನಾ 65 ರನ್‌ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರವೀಂದ್ರ ಜಡೇಜ 23, ನಾಯಕ ಧೋನಿ 6, ಅಶ್ವಿನ್ ಅಜೇಯ 3 ರನ್ ಗಳಿಸಿದರು.

303ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾ 45 ಓವರ್‌ಗಳಲ್ಲಿ 193 ರನ್‌ಗಳಿಸಿ ಸರ್ವ ಪತನಕಂಡಿತು. ಭಾರತದ ಪರ ಉಮೇಶ್ ಯಾದವ್ ನಾಲ್ಕು ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಮೋಹಿತ್ ಶರ್ಮಾ ಒಂದು ವಿಕೆಟ್ ಪಡೆದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top